ಸಂಘಟನೆಗಳು ಸಮಾಜದಲ್ಲಿ ಸೌಹಾರ್ದಕ್ಕೆ ಆದ್ಯತೆ ನೀಡಬೇಕು: ಜಿಫ್ರಿ ಮುತ್ತುಕೋಯ ತಂಙಳ್
ಪುತ್ತೂರು : ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಸಮಾಜದಲ್ಲಿ ನಡೆಯುವ ಅನಾಚಾರ ಮತ್ತು ಅನೈತಿಕ ಚಟುವಟಿಕೆ ಗಳಿಗೆ ಕಡಿವಾಣ ಹಾಕಿ ಅಭಿವೃದ್ಧಿಗೆ ಗಮನಹರಿಸಬೇಕು ಮತ್ತು ಸೌಹಾರ್ದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಅಧ್ಯಕ್ಷ, ಪುತ್ತೂರು ಖಾಝಿಯೂ ಆದ ಸೈಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ವತಿಯಿಂದ ಪುತ್ತೂರು ಸಾಲ್ಮರದ ಸೈಯದ್‌ಮಲೆ ಶಂಸುಲ್ ಉಲಮಾ ನಗರದಲ್ಲಿ ಮಂಗಳವಾರ ನಡೆದ ಸಮಸ್ತ ಉಲಮಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ತ ಕರ್ನಾಟಕ ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುಆಗೈದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅ ಶೈಖುನಾ ಆಲಿಕುಟ್ಟಿ ಉಸ್ತಾದ್ ಸಮಾರೋಪ ಭಾಷಣ ಮಾಡಿ ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಕೆ.ಎಂ ಉಸ್ಮಾನುಲ್ ಫೈಝಿ ತೋಡಾರು ಸ್ವಾಗತಿಸಿದರು. ಖತೀಬ್ ಉಮರ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಮುಖ್ಯ ಪ್ರಭಾಷಣಗೈದರು.
ಸೈಯದ್ ಮುಹಮ್ಮದ್ ತಂಙಳ್ ಸಾಲ್ಮರ ಧ್ವಜಾರೋಹಣಗೈದರು. ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಿತು.
ವಿವಿಧ ವಿಷಯಗಳ ಬಗ್ಗೆ ಪಿ.ಎಂ ಅಬ್ದುಲ್ ಸಲಾಂ ಬಾಖವಿ, ಅಬ್ದುಸ್ಸಮದ್ ಪೂಕೋಟೂರು, ಜಸೀಲ್ ಕಮಾಲ್ ಫೈಝಿ, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಎಂ.ಟಿ. ಅಬೂಬಕರ್ ದಾರಿಮಿ ವಿಷಯ ಮಂಡಿಸಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಕೆ.ಕೆ. ಮಾಹಿನ್ ಉಸ್ತಾದ್ ತೊಟ್ಟಿ, ಜಂಇಯ್ಯತುಲ್ ಮುದರ್ರಿಸೀನ್ ಜಿಲ್ಲಾ ಕಾರ್ಯ ದರ್ಶಿ ಹೈದರ್ ದಾರಿಮಿ ಕರಾಯ, ಮೂಸಲ್ ಫೈಝಿ ಮಿತ್ತೂರು, ಇಸ್ಮಾಯಿಲ್ ಫೈಝಿ ಕರಾಯ, ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಅಮೀರ್ ತಂಙಳ್ ಕಿನ್ಯ, ಸೈಯದ್ ಯಹ್ಯಾ ತಂಙಳ್ ಕಬಕ, ಅನಸ್ ತಂಙಳ್ ಕರ್ವೇಲು, ಶರಫುದ್ದೀನ್ ತಂಙಳ್ ಸಾಲ್ಮರ, ಉಮರ್ ಫೈಝಿ ಸಾಲ್ಮರ, ಕೆ.ಎಲ್. ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ, ಕೆ.ಬಿ ಅಬ್ದುಲ್ ಖಾದರ್ ದಾರಿಮಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಅಬ್ದುಲ್ ಅಝೀಝ್ ದಾರಿಮಿ, ಅಬ್ಬಾಸ್ ಮದನಿ, ಖಾಸಿಂ ದಾರಿಮಿ ಸವಣೂರು, ಮುಹಮ್ಮದ್ ದಾರಿಮಿ, ತಬೂಕ್ ಅಬ್ದುರ‌್ರಹ್ಮಾನ್ ದಾರಿಮಿ, ಜಂಇಯ್ಯತುಲ್ ಖುತ್ಬಾ ಜಿಲ್ಲಾಧ್ಯಕ್ಷ ಅಬ್ಬಾಸ್ ದಾರಿಮಿ ಕೆಲಿಂಜ, ಕಾರ್ಯದರ್ಶಿ ಅಬ್ದುರ‌್ರಶೀದ್ ರಹ್ಮಾನಿ ಪರ್ಲಡ್ಕ, ಮುಫತ್ತಿಷರುಗಳಾದ ಖಾಸಿಂ ಮುಸ್ಲಿಯಾರ್, ಕೆ.ಎಂ. ಉಮರ್ ದಾರಿಮಿ ಸಾಲ್ಮರ, ಕೆ.ಟಿ. ರಶೀದ್ ಮುಸ್ಲಿ ಯಾರ್, ಹನೀಫ್ ಮುಸ್ಲಿಯಾರ್ ಬೋಳಂತೂರು, ಉಮರುಲ್ ಫಾರೂಖ್ ದಾರಿಮಿ ತೆಕ್ಕಾರು, ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ, ಜೆ.ಪಿ. ಮುಹಮ್ಮದ್ ದಾರಿಮಿ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಶಂಸುದ್ದೀನ್ ದಾರಿಮಿ, ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್, ಮುಸ್ತಫಾ ಫೈಝಿ ಕಿನ್ಯ, ಇಬ್ರಾಹಿಂ ದಾರಿಮಿ ಕಡಬ, ರಫೀಕ್ ಹುದವಿ ಕೋಲಾರಿ, ಅನೀಸ್ ಕೌಸರಿ, ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಸದಸ್ಯ ಅಬ್ದುರ‌್ರಶೀದ್ ಹಾಜಿ ಪರ್ಲಡ್ಕ, ಸೈಯದ್ ಮಲೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಹಸನ್ ಮುದ್ದೋಡಿ, ಅಡ್ವಕೇಟ್ ನೂರುದ್ದೀನ್ ಸಾಲ್ಮರ, ಇಸ್ಮಾಯಿಲ್ ಸಾಲ್ಮರ, ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಅಬೂಬಕರ್ ಮುಲಾರ್, ಹಕೀಂ ಪರ್ತಿಪ್ಪಾಡಿ, ಅಬ್ದುಲ್ ಅಝೀಝ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.
ಕೆ.ಪಿ.ಎಂ. ಶರೀಫ್ ಫೈಝಿ ಕಡಬ ವಂದಿಸಿದರು.