ಧಾರ್ಮಿಕ ಶಿಕ್ಷಣ ಆಸಕ್ತಿಯಿಂದ ಕಲಿಯಬೇಕು: ಇಸ್ಹಾಕ್ ಸಖಾಫಿ

Update: 2024-05-01 05:04 GMT

ದೇರಳಕಟ್ಟೆ: ಮದ್ರಸ ಶಿಕ್ಷಣ ಆರಂಭ ದಲ್ಲಿಯೇ ಗಮನವಿಟ್ಟು ಉತ್ಸಾಹ ದಿಂದ ಅಭ್ಯಸಿಸಿದರೆ ಕಲಿಕೆ ದೊಡ್ಡ ಹೊರೆ ಆಗುವುದಿಲ್ಲ. ಎಲ್ಲದಕ್ಕೂ ಆಸಕ್ತಿ ಉತ್ಸಾಹ ಜಾಸ್ತಿ ಇದ್ದರೆ ಯಾವ ರೀತಿಯಲ್ಲೂ ಕಲಿಯಬಹುದು ಎಂದು ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ಅಭಿಪ್ರಾಯ ಪಟ್ಟರು.

ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಮದ್ರಸ ಶಿಕ್ಷಣ ಪುನರಾರಂಭ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸದರ್ ಉಸ್ತಾದ್ ಶರೀಫ್ ಸಅದಿ ಅವರು ಮದ್ರಸ ಶಿಕ್ಷಣ ಮುನ್ನೆಡೆಸಿಕೊಂಡು ಹೋಗುವ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಅಲ್ಲಿಂ ಇಸ್ಹಾಕ್ ಸಅದಿ ದುಆ ನೆರವೇರಿಸಿದರು. ಹಸನ್ ಸಅದಿ ಶಿಕ್ಷಣದ ಅವಶ್ಯಕತೆ ಬಗ್ಗೆ ವಿವರಿಸಿದರು. ರಝಾಕ್ ಸಅದಿ ಅವರು ವಿದ್ಯಾರ್ಥಿಗಳಿಗೆಸಂದೇಶ ನೀಡಿದರು.

ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು ಹಾಗೂ ಸಮಿತಿ ಸದಸ್ಯ ಪತ್ರಕರ್ತ ಬಶೀರ್ ಕಲ್ಕಟ್ಟ ಈ ಸಂದರ್ಭದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಇಲ್ಯಾಸ್ ಜುಮಾ ಮಸೀದಿ ಉಪಾಧ್ಯಕ್ಷ ಅಶ್ರಫ್ ಕಟ್ಟೆ, ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕಲ್ಕಟ್ಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಹಸೈನಾರ್ ತಟ್ಲ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News