ಡಿ.8, 9ರಂದು ದ.ಕ.ಜಿಲ್ಲೆಯಲ್ಲಿ ಸಮಸ್ತ ಸಂದೇಶ ಜಾಥಾ
ಮಂಗಳೂರು, ಡಿ.6: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಶತಮಾನೋತ್ಸವ ಅಂತರರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಚಾರಾರ್ಥ ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರ ನೇತೃತ್ವದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಮಸ್ತ ಸಂದೇಶ ಜಾಥಾ ಡಿ.8,9ರಂದು ನಡೆಯಲಿದೆ.
ಡಿ.8ರಂದು ಮುಲ್ಕಿಯಿಂದ ಸಮಸ್ತ ಕೇಂದ್ರ ಮುಶಾವರ ಸದಸ್ಯ ತೋಡಾರ್ ಉಸ್ಮಾನುಲ್ ಫೈಝಿ ನೇತೃತ್ವದಲ್ಲಿ ಆರಂಭಗೊಳ್ಳುವ ಯಾತ್ರೆಯು ಕಕ್ಕಿಂಜೆಯಲ್ಲಿ ಸಮಾರೋಪಗೊಳ್ಳಲಿದೆ. ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ನೇತೃತ್ವದಲ್ಲಿ ಕಲ್ಲುಗುಂಡಿಯಿಂದ ಪ್ರಾರಂಭಗೊಂಡು ಪುತ್ತೂರಿನಲ್ಲಿ ಸಮಾರೋಪಗೊಳ್ಳಲಿದೆ.
ದ್ವಿತೀಯ ದಿನ ಉಸ್ಮಾನುಲ್ ಫೈಝಿ ನೇತೃತ್ವದ ಯಾತ್ರೆಯು ಮಂಗಳೂರಿನ ಬಂದರ್ ಮಖಾಮಿನಿಂದ ಹಾಗೂ ಬಂಬ್ರಾಣ ಉಸ್ತಾದರ ನೇತೃತ್ವದ ಯಾತ್ರೆಯು ಉಪ್ಪಿನಂಗಡಿಯಿಂದ ಪ್ರಾರಂಭಗೊಂಡು ಎರಡೂ ಜಾಥಾಗಳು ಮಿತ್ತಬೈಲ್ ನಲ್ಲಿ ಸಮಾರೋಪಗೊಳ್ಳಲಿದೆ. ಜಿಲ್ಲಾ ವ್ಯಾಪ್ತಿಯ ರೇಂಜ್ ಕೇಂದ್ರಗಳಲ್ಲಿ ಜಾಥಾ ಸ್ವಾಗತ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಜಾಥಾ ಸಂಯೋಜಕರು ತಿಳಿಸಿದ್ದಾರೆ