×
Ad

ಮೂಡಿಗೆರೆ: ದೇವರಮನೆ ರಸ್ತೆಗೆ ಬಿದಿದ್ದ ಬೃಹತ್ ಮರ ತೆರವು

Update: 2023-07-09 22:51 IST

ಮೂಡಿಗೆರೆ, ಜು.9: ತಾಲೂಕಿನ ದೇವರಮನೆ ಪ್ರವಾಸಿ ತಾಣಕ್ಕೆ ತೆರಳುವ ರಸ್ತೆಗೆ ಹೆಸಗೂಡು ಸಮೀಪ ಬೃಹತ್ ಮರವೊಂದು ಶನಿವಾರ ಅಡ್ಡಲಾಗಿ ಬಿದಿದ್ದು, ರವಿವಾರ ಪಿಡಬ್ಲೂಡಿ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಮರವನ್ನು ತೆರವುಗೊಳಿಸಿದರು.

ತಾಲೂಕಿನ ಹೆಸಗೂಡು ಸಮೀಪ ಮಳೆಯಿಂದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದಿದ್ದರಿಂದ ದೇವರುಮನೆ, ಗುತ್ತಿ, ಬಿಳ್ಳೂರು ಗ್ರಾಮಕ್ಕೆ ತೆರಳುವ ಪ್ರಮುಖ ರಸ್ತೆ ಸಂಚಾರಕ್ಕೆ ತೊಡಕುಂಟಾಗಿತ್ತು. ಇದರಿಂದ ವಾಹನ ಚಾಲಕರು ಮತ್ತು ಗ್ರಾಮದ ಜನರು ಶನಿವಾರ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತಾಗಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ಬೆಳಗ್ಗೆ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಗ್ರಾಮಸ್ಥರ ನೆರವಿನೊಂದಿಗೆ ಮರವನ್ನು ಕತ್ತರಿಸಿ, ತೆರವುಗೊಳಿಸುವ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News