ಡಿ.1ರಿಂದ ಶಬರಿಮಲೈಗೆ ಕೆಎಸ್ಸಾರ್ಟಿಸಿ ವೋಲ್ವೋ ಬಸ್ ಕಾರ್ಯಾಚರಣೆ

Update: 2023-11-27 18:05 GMT

ಸಾಂದರ್ಭಿಕ ಚಿತ್ರ 

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬೆಂಗಳೂರು ಕೇಂದ್ರೀಯ ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರು/ಭಕ್ತಾಧಿಗಳ ಅನುಕೂಲಕ್ಕಾಗಿ ಡಿ.1ರಿಂದ ಹೊಸದಾಗಿ ಬೆಂಗಳೂರು-ನೀಲಕ್ಕಲ್(ಪಂಪಾ-ಶಬರಿಮಲೈ) ವೋಲ್ವೋ ಬಸ್ ಕಾರ್ಯಚರಣೆ ಮಾಡಲಿದೆ.

ವಯಸ್ಕರಿಗೆ 1,600 ರೂ. ದರ ನಿಗದಿಪಡಿಸಿದೆ. ಇಲ್ಲಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50(13.50)ಕ್ಕೆ ಬಸ್ ಹೊರಡಲಿದ್ದು, ಶಬರಿಮಲೈ ಅನ್ನು ಬೆಳಗ್ಗೆ 6:45ಕ್ಕೆ ತಲುಪಲಿದೆ. ಅದೇ ರೀತಿಯಲ್ಲಿ ಶಬರಿಮಲೈಯಿಂದ ಸಂಜೆ 6ಗಂಟೆಗೆ ಹೊರಡಲಿದ್ದು, ಮರುದಿನ ಮಧ್ಯಾಹ್ನ 1ಗಂಟೆಯ ವೇಳೆ ಬೆಂಗಳೂರು ತಲುಪಲಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News