ಖ್ಯಾತ ನಟಿ ಅಮೃತಾ ಪಾಂಡೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2024-04-30 05:07 GMT

ನಟಿ ಅಮೃತಾ ಪಾಂಡೆ | PC : X 

ಹೊಸದಿಲ್ಲಿ: ಭೋಜಪುರಿ ನಟಿ ಅಮೃತಾ ಪಾಂಡೆ ಬಿಹಾರದ ಭಗಲ್ಪುರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಎಪ್ರಿಲ್‌ 27ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 27 ವರ್ಷದ ನಟಿ ಆತ್ಮಹತ್ಯೆಗೈದಿದ್ದಾರೆಂದು ಶಂಕಿಸಲಾಗಿದೆ.

ಸಾಯುವ ಮುನ್ನ ನಟಿ ವಾಟ್ಸ್ಯಾಪ್‌ ಸ್ಟೇಟಸ್‌ನಲ್ಲಿ ಹಾಕಿದ ಸ್ಟೇಟಸ್‌ ಸಾಕಷ್ಟು ಕುತೂಹಲ ಕೆರಳಿಸಿದೆ. ನನ್ನ ಜೀವನ ಎರಡು ನಾವೆಗಳಲ್ಲಿ ಸಾಗುತಿತ್ತು. ಒಂದನ್ನು ಮುಳುಗಿಸುವ ಮೂಲಕ ನಾವು ಪಯಣವನ್ನು ಸುಲಭಗೊಳಿಸಿದೆವು ಎಂದು ಆಕೆಯ ಪೋಸ್ಟ್‌ ಹೇಳಿದೆ. ಆಕೆ ತಮ್ಮ ಪತಿಯನ್ನು ಅಗಲಿದ್ದಾರೆ.

ಸಾಕಷ್ಟು ಅವಕಾಶಗಳು ದೊರೆಯುತ್ತಿಲ್ಲ ಎಂದು ಅಮೃತಾ ಚಿಂತಿತರಾಗಿದ್ದರು ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಆಕೆಯ ಕುಟುಂಬ ತಿಳಿಸಿದೆ

ನಟಿ ಮುಂಬೈಯಲ್ಲಿ ಅನಿಮೇಷನ್‌ ಇಂಜಿನಿಯರ್‌ ಆಗಿರುವ ಪತಿ ಚಂದ್ರಮಣಿ ಝಂಗದ್‌ ಜೊತೆ ವಾಸಿಸುತ್ತಿದ್ದರು. ಆಕೆ ಎಪ್ರಿಲ್‌ 18ರಂದು ಸೋದರಿಯ ವಿವಾಹಕ್ಕೆಂದು ಭಗಲ್ಪುರಕ್ಕೆ ಪತಿಯೊಂದಿಗೆ ತೆರಳಿದ್ದರು. ವಿವಾಹದ ನಂತರ ಪತಿ ವಾಪಸ್‌ ಆಗಿದ್ದರೂ ಆಕೆ ಅಲ್ಲಿಯೇ ಉಳಿದುಕೊಂಡಿದ್ದರು.

ಭೋಜಪುರಿ ಸಿನಿಮಾ ಹೊರತಾಗಿ ಹಿಂದಿ ಸಿನಿಮಾ ಟಿವಿ ಶೋ ಮತ್ತು ವೆಬ್‌ ಸರಣಿಗಳಲ್ಲೂ ಆಕೆ ನಟಿಸಿದ್ದರು. ವೆಬ್‌ ಸರಣಿ “ಪರಿಶೋಧ್‌” ನಲ್ಲಿನ ಪಾತ್ರಕ್ಕಾಗಿ ಆಕೆ ಖ್ಯಾತಿ ಪಡೆದಿದ್ದರು.

ಆಕೆಯ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗಾಗಿ ಒಂದು ತಂಡವನ್ನು ರಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News