×
Ad

ವಿಮಾನಗಳ ಹಾರಾಟ ರದ್ಧತಿ| ಇಂಡಿಗೋ ಸಿಇಒಗೆ ಶೋಕಾಸ್ ನೋಟಿಸ್ ನೀಡಿದ ಡಿಜಿಸಿಎ

Update: 2025-12-07 15:39 IST

Photo| timesofindia

ಹೊಸದಿಲ್ಲಿ,ಡಿ.7: ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಕಳೆದ ವಾರ ನೂರಾರು ಇಂಡಿಗೋ ವಿಮಾನಯಾನಗಳ ರದ್ದತಿಗೆ ಕಾರಣವಾದ ಭಾರೀ ಪ್ರಮಾಣದ ಹಾರಾಟ ವ್ಯತ್ಯಯಗಳಿಗಾಗಿ ನಿಮ್ಮ ವಿರುದ್ಧ ಕ್ರಮವನ್ನು ಏಕೆ ಆರಂಭಿಸಬಾರದು ಎನ್ನುವುದರ ಕುರಿತು 24 ಗಂಟೆಗಳಲ್ಲಿ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಿ ಕಂಪೆನಿಯ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.

ಇಂತಹ ದೊಡ್ಡ ಪ್ರಮಾಣದ ಕಾರ್ಯಾಚರಣೆ ವೈಫಲ್ಯಗಳು ಯೋಜನೆ, ಮೇಲ್ವಿಚಾರಣೆ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಗಮನಾರ್ಹ ಲೋಪಗಳನ್ನು ಹಾಗೂ ಪೈಲಟ್‌ಗಳ ವಿಶ್ರಾಂತಿ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದ ನಿಯಮಗಳ ಅನುಸರಣೆಯಲ್ಲಿ ಕೊರತೆಯನ್ನು ಸೂಚಿಸುತ್ತವೆ ಎಂದು ಶೋಕಾಸ್ ನೋಟಿಸ್‌ನಲ್ಲಿ ಹೇಳಲಾಗಿದೆ.

ವಿಮಾನ ನಿಯಮಗಳು,1937ರ 42ಎ ನಿಬಂಧನೆ ಮತ್ತು ಪೈಲಟ್‌ಗಳ ವಿಶ್ರಾಂತಿಗೆ ಸಂಬಂಧಿಸಿದ ನಾಗರಿಕ ವಾಯುಯಾನ ನಿಯಮಗಳನ್ನು ಪಾಲಿಸುವಲ್ಲಿ ಇಂಡಿಗೋ ವಿಫಲಗೊಂಡಿದೆ.

ಸಿಇಒ ಆಗಿ ನೀವು ವಿಮಾನಯಾನ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ನಿಮ್ಮ ಹೊಣೆಗಾರಿಕೆಯಾಗಿದೆ. ಆದರೆ ವಿಶ್ವಾಸಾರ್ಹ ಕಾರ್ಯಾಚರಣೆಗಳನ್ನು ನಡೆಸಲು ಹಾಗೂ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಕಾಲಿಕ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವ ನಿಮ್ಮ ಕರ್ತವ್ಯದಲ್ಲಿ ನೀವು ವಿಫಲಗೊಂಡಿದ್ದೀರಿ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ನಿಮ್ಮ ವಿರುದ್ಧ ಜಾರಿ ಕ್ರಮವನ್ನೇಕೆ ಆರಂಭಿಸಬಾರದು ಎನ್ನುವುದಕ್ಕೆ 24 ಗಂಟೆಗಳಲ್ಲಿ ವಿವರಿಸುವಂತೆ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News