×
Ad

ಜಾರ್ಖಂಡ್ |ತರಬೇತಿ ವಿಮಾನ ಪತನ ; ಇಬ್ಬರು ಪೈಲಟ್ ಗಳು ನಾಪತ್ತೆ

Update: 2024-08-21 20:36 IST

ಜಮ್ಶೆಡ್‌ಪುರ ದ ಸೋನಾರಿ ವಿಮಾನ ನಿಲ್ದಾಣ

ರಾಂಚಿ : ಜಮ್ಶೆಡ್‌ಪುರ ದ ಸೋನಾರಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಭಾರತೀಯ ವಾಯು ಪಡೆಯ ತರಬೇತು ವಿಮಾನ ರಾಂಚಿಯ ಸಮೀಪ ಪತನಗೊಂಡಿದೆ. ಅದರಲ್ಲಿದ್ದ ಇಬ್ಬರು ಪೈಲಟ್ ಗಳು ನಾಪತ್ತೆಯಾಗಿದ್ದಾರೆ.

ಪೂರ್ವಾಹ್ನ 11 ಗಂಟೆಗೆ ಹಾರಾಟ ಆರಂಭಿಸಿದ ಕೂಡಲೇ ವಿಮಾನ ವಾಯು ಸಂಚಾರ ನಿಯಂತ್ರಣದಿಂದ ಸಂಪರ್ಕವನ್ನು ಕಳೆದುಕೊಂಡಿತು. ಈ ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದರು. ಅವರು ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಪೊಲೀಸರು ಹಾಗೂ ಜೆಮ್ಶೆದ್ಪುರ, ಸರೈಕೇಲಾದ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಹಾಗೂ ಜಿಜಿಕಾ ಪಂಚಾಯತ್ ನ ಬರುಬೇರಾದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.

ಹೆಲಿಕಾಪ್ಟರ್ ಸೇರಿದಂತೆ ರಕ್ಷಣಾ ಕಾರ್ಯಕರ್ತರ ತಂಡ ಪೈಲಟ್ಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಜೆಮ್ಶೆದ್ಪುರ ಹಾಗೂ ಸರೈಕೇಲಾದ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ವಿಮಾನ ಪತನದ ಸಂದರ್ಭ ಅವರು ಹೊರಗೆ ಹಾರಿರಬಹುದು ಎಂದು ಶಂಕಸಿಲಾಗಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News