ಮತದಾನಕ್ಕೆ ಅನುಕೂಲವಾಗುವಂತೆ ಜುಮಾ ನಮಾಝ್‌ ನಿಗದಿಪಡಿಸಲು ಸಮಸ್ತ ಸಲಹೆ

Update: 2024-04-19 09:35 GMT

ಸಾಂದರ್ಭಿಕ ಚಿತ್ರ | PC : NDTV 

 

ಮಲಪ್ಪುರಂ: ಮುಂದಿನ ಶುಕ್ರವಾರ ಲೋಕಸಭಾ ಚುನಾವಣೆ ನಡೆಯುವಾಗ ಶುಕ್ರವಾರದ ಜುಮಾ ನಮಾಝ್ ಗಾಗಿ ಯಾರೂ ಮತದಾನದಿಂದ ದೂರ ಉಳಿಯದಂತೆ ಸಮಸ್ತ ಪ್ರಯತ್ನ ನಡೆಸುತ್ತಿದೆ.

ಯಾರೂ ಮತದಾನದಿಂದ ಗೈರಾಗದಂತೆ ನೋಡಿಕೊಳ್ಳಲು ಸಮಸ್ತ ಶ್ರಮಿಸುತ್ತಿದ್ದು, ಮತದಾನ ಕೇಂದ್ರದಲ್ಲಿರುವ ಅಧಿಕಾರಿಗಳು, ಮತದಾರರಿಗೆ ಅನುಕೂಲ ಆಗುವ ರೀತಿಯಲ್ಲಿ ನಮಾಝಿನ ಸಮಯವನ್ನು ಬದಲಾಯಿಸಲು ಮಸೀದಿ ಕಮಿಟಿಗಳಿಗೆ ತಿಳಿಸಲಾಗಿದೆ.

ಚುನಾವಣೆ ದಿನದಂದು ಪ್ರಾರ್ಥನೆ ಸಮಯವನ್ನು ಒಂದು ಗಂಟೆ ಮುಂದೂಡಬೇಕೆಂದು ಸಮಸ್ತ ಸಲಹೆ ನೀಡಿದೆ.

ಸಮಸ್ತದ ಅಧೀನದಲ್ಲಿರುವ ಮಸೀದಿಗಳಲ್ಲಿ ನಮಾಝ್‌ ಗೆ ಕರೆ (ಆಝಾನ್‌) ನೀಡಿದಾಕ್ಷಣ ಪ್ರಾರ್ಥನೆ ಆರಂಭಗೊಳ್ಳಬೇಕು. ಚುನಾವಣಾ ಕರ್ತವ್ಯದಲ್ಲಿದಲ್ಲಿರುವವರನ್ನೂ ಗಮನದಲ್ಲಿರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಸ್ತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News