ಜೂನ್ 4ರಂದು ಬಿಜೆಡಿ ಸರಕಾರದ ಅವಧಿ ಮುಗಿಯಲಿದೆ ಎಂದು ಭವಿಷ್ಯ ನುಡಿದ ಪ್ರಧಾನಿ

Update: 2024-05-06 15:17 GMT

PC : PTI 

ಬೆರ್ಹಾಂಪುರ್ (ಒಡಿಶಾ): ನಾನು ಜಗನ್ನಾಥನ ಪುತ್ರನೆಂದು ಘೋಷಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಜೂನ್ 4ರಂದು ಬಿಜೆಡಿ ಸರಕಾರದ ಅವಧಿ ಮುಗಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಒಡಿಶಾದಲ್ಲಿ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳೆರಡೂ ಒಟ್ಟಿಗೆ ನಡೆಯುತ್ತಿದ್ದು, ಒಡಿಶಾದಲ್ಲಿ ಬಿಜೆಪಿ ಸರಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಚುನಾವಣಾ ಫಲಿತಾಂಶ ಪ್ರಕಟವಾಗುವ ಜೂನ್ 4ರಂದು ಬಿಜೆಡಿ ಸರಕಾರದ ಅವಧಿ ಮುಗಿಯಲಿದೆ ಎಂದು ಸೋಮವಾರ ಭವಿಷ್ಯ ನುಡಿದರು.

ಬೆರ್ಹಾಂಪುರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕನಿಸಿಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ಮೇ 6. ಜೂನ್ 6ರ ಹೊತ್ತಿಗೆ ಬಿಜೆಪಿ ಮುಖ್ಯಮಂತ್ರಿಯನ್ನು ಘೋಷಿಸಲಾಗುತ್ತದೆ ಹಾಗೂ ಜೂನ್ 10ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇದನ್ನು ಬರೆದಿಟ್ಟುಕೊಳ್ಳಿ. ನಾನು ನಿಮ್ಮನ್ನು ಬಿಜೆಪಿ ಸರಕಾರದ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದರು.

"ಒಡಿಶಾದಲ್ಲಿ ಪ್ರಪ್ರಥಮ ಬಾರಿಗೆ ಡಬಲ್ ಎಂಜಿನ್ ಸರಕಾರ ಬರಲಿದೆ" ಎಂದು ಅವರು ಘೋಷಿಸಿದರು.

ಚುನಾವಣೆ ಘೋಷಣೆಯಾದಾಗಿನಿಂದ ಒಡಿಶಾದಲ್ಲಿ ಇದು ಪ್ರಧಾನಿ ಮೋದಿಯ ಪ್ರಥಮ ಚುನಾವಣಾ ಸಮಾವೇಶವಾಗಿದೆ. ರಾಜ್ಯದಲ್ಲಿ ಮೇ 13ರಿಂದ ನಾಲ್ಕು ಹಂತದಲ್ಲಿ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News