×
Ad

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಆಯ್ಕೆ

Update: 2025-05-21 10:15 IST

Photo | X/@vikassinghSrAdv

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಆಯ್ಕೆಯಾಗಿದ್ದಾರೆ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಿದೆ. ಹಿರಿಯ ವಕೀಲ ಆದಿಶ್ ಸಿ ಅಗರ್‌ವಾಲ ಮತ್ತು ಪ್ರದೀಪ್ ಕುಮಾರ್ ರೈ ಅವರನ್ನು ಸೋಲಿಸುವ ಮೂಲಕ ವಿಕಾಸ್ ಸಿಂಗ್ ನಾಲ್ಕನೇ ಬಾರಿಗೆ ಈ ಹುದ್ದೆಗೆ ಆಯ್ಕೆಯಾದರು.

ಹಿರಿಯ ವಕೀಲ ಕಪಿಲ್ ಸಿಬಲ್ ಕಳೆದ ವರ್ಷ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು 2018, 2021 ಮತ್ತು 2022-23ರಲ್ಲಿ SCBA ಅಧ್ಯಕ್ಷರಾಗಿ ವಿಕಾಸ್ ಸಿಂಗ್ ಕಾರ್ಯ ನಿರ್ವಹಿಸಿದ್ದರು.

2024ರಲ್ಲಿ ಅಂತಿಮಗೊಳಿಸಿದ ಮತದಾರರ ಪಟ್ಟಿಯ ಆಧಾರದದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ಮೇ 20ರಂದು SCBA ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News