×
Ad

ಭಾರತದ 'ಆಯುಷ್ಮಾನ್‌ ಭಾರತ್‌' ಯೋಜನೆ ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

Update: 2023-08-19 16:24 IST

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರಯೇಸಸ್ (Photo: Twitter/@MoHFW_INDIA)

ಗಾಂಧಿನಗರ್: ಭಾರತ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರಯೇಸಸ್ ಶ್ಲಾಘಿಸಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ಜಿ20 ಆರೋಗ್ಯ ಸಚಿವರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಡಾ. ಟೆಡ್ರೋಸ್‌ ಮಾತನಾಡುತ್ತಿದ್ದರು.

ಜಿ20 ಶೃಂಗಸಭೆಯನ್ನು ಆಯೋಜಿಸಿದ ಭಾರತದ ನಾಯಕತ್ವ ಮತ್ತದರ ಆತಿಥ್ಯವನ್ನು ಡಾ. ಟೆಡ್ರೋಸ್‌ ಶ್ಲಾಘಿಸಿದರು.

“ಸಾರ್ವತ್ರಿಕ ಆರೋಗ್ಯ ವಿಮೆ ಮತ್ತು ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಜಾರಿಗೊಳಿಸಿದ ಭಾರತದ ಕ್ರಮವನ್ನು ಮೆಚ್ಚುತ್ತೇನೆ,” ಎಂದು ಅವರು ಹೇಳಿದರು.

“ಗಾಂಧಿನಗರದಲ್ಲಿ ನಾನು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರವೊಂದಕ್ಕೆ ಭೇಟಿ ನೀಡಿದೆ ಹಾಗೂ ಅಲ್ಲಿ 1000 ಕುಟುಂಬಗಳಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿದೆ,” ಎಂದು ಅವರು ಹೇಳಿದರಲ್ಲದೆ ಗುಜರಾತಿನಲ್ಲಿ ಒದಗಿಸಲಾಗುವ ಟೆಲಿಮೆಡಿಸಿನ್‌ ಸವಲತ್ತುಗಳನ್ನೂ ಅವರು ಶ್ಲಾಘಿಸಿದರು.

ಜಿ20 ಆರೋಗ್ಯ ಸಚಿವರ ಸಭೆಯಲ್ಲಿ ವಿವಿಧ ದೇಶಗಳ 70 ಪ್ರತಿಇಧಿಗಳು ಮತ್ತು ಆರೋಗ್ಯ ಸಚಿವರು ಭಾಗವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News