*ದೇಶದಲ್ಲಿ ಅಸಹಿಷ್ಣುತೆ ಸ್ವಲ್ಪ ಇದೆ.

Update: 2015-12-11 05:36 GMT

*ದೇಶದಲ್ಲಿ ಅಸಹಿಷ್ಣುತೆ ಸ್ವಲ್ಪ ಇದೆ.
- ವೆಂಕಯ್ಯನಾಯ್ಡು, ಕೇಂದ್ರ ಸಚಿವ

ಅಡ್ವಾಣಿಯನ್ನು ಉದ್ದೇಶಿಸಿ ಈ ಮಾತನ್ನು ಹೇಳಿರಬೇಕು

. ...................................................
*ನನಗೆ ವಕೀಲಿ ವೃತ್ತಿ ಇಷ್ಟ.
- ನ್ಯಾ.ಸುಭಾಷ್ ಅಡಿ, ಉಪಲೋಕಾಯುಕ್ತ

ರಾಜಕಾರಣಿಗಳ ವಕೀಲರಾಗಿ ಲೋಕಾಯುಕ್ತದಲ್ಲಿರುವ ಬದಲು, ಅದೇ ವೃತ್ತಿಗೆ ಮರಳಬಾರದೇ?
...................................................

*ನಮ್ಮ ಪಕ್ಷದಲ್ಲಿ ಭಿನ್ನಮತ ಇರುವುದು ನಿಜ. ಅದನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ. - ದೇವೇಗೌಡ, ಮಾಜಿ ಪ್ರಧಾನಿ

ನಿಮ್ಮ ಪಕ್ಷ ಇರುವುದು ನಿಜವೇ?
...................................................
*ಏಕ ಭಾರತ, ಶ್ರೇಷ್ಠ ಭಾರತ ನಮ್ಮ ಗುರಿ.
-ನರೇಂದ್ರ ಮೋದಿ, ಪ್ರಧಾನಿ

ಏಕ ಭಾರತ ಎಂದರೆ, ವೈವಿಧ್ಯತೆಯನ್ನು ನಾಶ ಮಾಡುವುದೇ?
...................................................
*ಸಮಾಜವನ್ನು ನಿಯಂತ್ರಿಸುವ ಶಕ್ತಿಗಳು ಭಯೋತ್ಪಾದನೆಗಿಂತ ಭಯಾನಕ.
-ಕುಂ. ವೀರಭದ್ರಪ್ಪ, ಸಾಹಿತಿ

ಭಯೋತ್ಪಾದಕರನ್ನು ಗುಂಡಿಟ್ಟುಕೊಲ್ಲಬಹುದು. ಆದರೆ ಇವರ ವಿರುದ್ಧ ಆ ಅವಕಾಶವಿಲ್ಲ. ...................................................

*ಭಾರತದಲ್ಲಿ ಮುಸ್ಲಿಮನೊಬ್ಬನಿಗಿಂತ ದನವೊಂದು ಸುರಕ್ಷಿತವಾಗಿದೆ. -ಶಶಿ ತರೂರು, ಸಂಸದ

ಮನುಷ್ಯರನ್ನು ದನಕ್ಕಿಂತ ಕೀಳಾಗಿ ನಡೆಸಿಕೊಂಡು ಬಂದ ಪರಂಪರೆಯಲ್ಲವೇ ನಮ್ಮದು.
...................................................

*ದೇಶದಲ್ಲಿ ಇಂದು ಪ್ರತಿಭಟನೆ ಎಂದರೆ ದೇಶದ್ರೋಹ ಎಂಬಂತಾಗಿಬಿಟ್ಟಿದೆ. -ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ದೇಶದ್ರೋಹಿಗಳೆಲ್ಲ ದೇಶ ರಕ್ಷಕರ ವೇಷದಲ್ಲಿರುವಾಗ ಇನ್ನೇನು ಆಗಲು ಸಾಧ್ಯ?
...................................................
*ಕೊಳೆಯಿರುವುದು ಮನಸ್ಸಿನಲ್ಲಿ, ರಸ್ತೆಯಲ್ಲಲ್ಲ.
-ಪ್ರಣವ್ ಮುಖರ್ಜಿ, ರಾಷ್ಟ್ರಪತಿ

ಮನಸ್ಸಿನ ಕೊಳೆಯನ್ನು ಶುಚಿಗೊಳಿಸಲು ತೆರಿಗೆ ವಿಧಿಸುವ ಸಾಧ್ಯತೆಗಳಿವೆ.
...................................................
*ಕೇಂದ್ರದ ಲೋಕಪಾಲ್ ಕಾಯ್ದೆಯು ಹಲ್ಲಿಲ್ಲದ ಹುಲಿಯಂತೆ.
-ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ

ಬೆಳೆದ ಹಾಗೆ ಹಲ್ಲುಗಳು ಮೂಡುತ್ತವೆ ಎಂದು ದಂತವೈದ್ಯರು ಭರವಸೆ ಕೊಟ್ಟಿದ್ದಾರಂತೆ.
...................................................
*ದೇಶದಲ್ಲಿ ಯಾವುದೇ ರೀತಿಯ ಅಸಹಿಷ್ಣುತೆ ಇಲ್ಲ.
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ದೇಶದಲ್ಲಿ ಇಲ್ಲ, ನಿಮ್ಮಳಗೆ ಇದೆ ಎನ್ನುವುದು ಕೆಲವರ ಆರೋಪ.
...................................................
*ನನ್ನ ಜೀವಿತಾವಧಿಯಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ.
- ಮೋಹನ್‌ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಜನರ ಜೀವ ಬಲಿಕೊಡುವ ನಿಮ್ಮ ಜೀವ ಉಳಿಸುವ ಆಲೋಚನೆಯೇ?
...................................................
*ಮೋದಿಗಿಂತ ಮನಮೋಹನ್ ಸಿಂಗ್ ಉತ್ತಮ ಪ್ರಧಾನಿ
-ಅಮರ್‌ಜಿತ್ ಸಿಂಗ್ ದುಲತ್, ರಾ ಮಾಜಿ ಮುಖ್ಯಸ್ಥ

ಸತ್ತ ಎಮ್ಮೆಗೆ ಹಾಲು ಜಾಸ್ತಿ.
...................................................
*ಪ್ರಧಾನಿ ಮೋದಿ ಪ್ರಾಮಾಣಿಕ ಮತ್ತು ನೇರ ವ್ಯಕ್ತಿತ್ವದ ವ್ಯಕ್ತಿ.

-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ ನೀವು ತೋರಿಸಿದಲ್ಲೆಲ್ಲ ಸಹಿ ಹಾಕುತ್ತಿರಬೇಕು. ...................................................
*ಮುಲಾಯಂ ಪ್ರಧಾನಿ, ರಾಹುಲ್ ಉಪಪ್ರಧಾನಿ ಅಭ್ಯರ್ಥಿಯಾಗುವುದಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ಧ.
-ಅಖಿಲೇಶ್ ಯಾದವ್, ಉ.ಪ್ರ. ಮುಖ್ಯಮಂತ್ರಿ

ನಿಮ್ಮನ್ನು ರಾಷ್ಟ್ರಪತಿ ಮಾಡಬೇಕು ಎನ್ನುವ ಶರತ್ತು ಇಲ್ಲ ತಾನೇ?
...................................................
*ದಾಭೋಲ್ಕರ್ ಮತ್ತು ಕಲಬುರ್ಗಿ ಹತ್ಯೆಯಲ್ಲಿ ಸಾಮ್ಯತೆಯಿದೆ.
-ಡಾ.ಪರಮೇಶ್ವರ್, ಗೃಹಸಚಿವ

ಆರೋಪಿಯ ರೇಖಾ ಚಿತ್ರಕ್ಕೆ ಸಾಮ್ಯತೆ ಇರುವವನೊಬ್ಬನ ನಿಗೂಢ ಸಾವಿನ ಬಗ್ಗೆ ಮಾತನಾಡಿ. ...................................................
*ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿ ಅವರ ಕೈಗಳನ್ನು ಕಟ್ಟಿಹಾಕಬಾರದು.
-ಎಚ್. ಆಂಜನೇಯ, ಸಮಾಜ ಕಲ್ಯಾಣ ಸಚಿವ

ಬದಲಿಗೆ ಕೈಗಳನ್ನು ಕತ್ತರಿಸಿ ಹಾಕಬೇಕು ಎನ್ನುವ ಸಲಹೆಯಾಗಿರಬಹುದೇ?
...................................................
*ಸಮಾಜ ಸುಶಿಕ್ಷಿತವಾದರೆ ಶೋಷಣೆ ಕಡಿಮೆಯಾಗುತ್ತದೆ.
-ರಮಾನಾಥ ರೈ, ದ.ಕ. ಜಿಲ್ಲಾಉಸ್ತುವಾರಿ ಸಚಿವ

ಸುಶಿಕ್ಷಿತರಿಗೆ ಶೋಷಣೆಯನ್ನು ಮುಚ್ಚಿ ಹಾಕುವುದಕ್ಕೆ ಗೊತ್ತಿರುತ್ತದೆ. ...................................................
*ಕಂಬಳ ರೈತರ ಸ್ವಾಭಿಮಾನದ ಸಂಕೇತ.
-ವಿನಯಕುಮಾರ್ ಸೊರಕೆ, ನಗರಾಭಿವೃದ್ಧಿ ಸಚಿವ

ಕೋಳಿಕಟ್ಟ?

Writer - ಪಿಎ ರೈ

contributor

Editor - ಪಿಎ ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...