ಬಂಗಾರಪೇಟೆ: ಈಜಲು ತೆರಳಿದ ನಾಲ್ವರು ಬಾಲಕರು ನೀರುಪಾಲು, ಓರ್ವ ನಾಪತ್ತೆ
Update: 2015-12-31 17:40 IST
ಕೋಲಾರ, ಡಿ.31: ಕೆರೆಗೆ ಈಜಲು ತೆರಳಿದ್ದ ಐವರ ಪೈಕಿ ನಾಲ್ವರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಗಾರಪೇಟೆ ತಾಲೂಕಿನ ಕಂಬಂಪಳ್ಳಿ ಎಂಬಲ್ಲಿ ಗುರುವಾರ ಅಪರಾಹ್ನ ನಡೆದಿದೆ.
ಮೃತರನ್ನು ಇಲ್ಲಿನ ಕೆಜಿಎಫ್ ಪಟ್ಟಣದ ಅಂಬೇಡ್ಕರ್ ನಗರ ನಿವಾಸಿಗಳಾದ ಸೈಯದ್ ತೌಹೀದ್(16), ಸಿಲ್ವರ್ ಸ್ಟಾರ್ ಸೇರಿದಂತೆ ನಾಲ್ವರು ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಇನ್ನೋರ್ವ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಈ ಐವರು ಗೆಳೆಯರು ಕಂಬಂಪಳ್ಳಿ ಗ್ರಾಮದಲ್ಲಿರುವ ಕೆರೆಯಲ್ಲಿ ಈಜಲೆಂದು ತೆರಳಿದ್ದ ವೇಳಿ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಆ್ಯಂಡರ್ಸನ್ ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.