×
Ad

ಬಿಸಿಯೂಟ ಮಾಡಿದರು ಬಳಿಕ ಶಾಲೆಗೆ ಬೆಂಕಿ ಹಚ್ಚಿದರು !

Update: 2015-12-31 17:52 IST

ರಾಯಚೂರು, ಡಿ.31: ದುಷ್ಕರ್ಮಿಗಳು ಶಾಲೆಗೆ ನುಗ್ಗಿ ಬೆಂಕಿ ಹಚ್ಚಿದ ಪರಿಣಾಮವಾಗಿ ಶಾಲೆಯೊಳಗಿದ್ದ ಅಕ್ಕಿ, ಬೇಳೆ, ಕಂಪ್ಯೂಟರ್ ಸುಟ್ಟು ಭಸ್ಮವಾದ ಘಟನೆ ಇಲ್ಲಿನ ದೇವದುರ್ಗ ದಲ್ಲಿ ನಡೆದಿದೆ.


  ದೇವದುರ್ಗ ಬಾಲಕಿಯರ ಸರಕಾರಿ ಪ್ರೌಢ ಶಾಲೆಗೆ ನುಗ್ಗಿದ ದುಷ್ಕರ್ಮಿಗಳು ಶಾಲೆಯೊಳಗಿದ್ದ ಬಿಸಿಯೂಟದ ಸಾಮಗ್ರಿಗಳನ್ನು ಹೊರಗೆ ಹಾಕಿದ್ದಾರೆ. ಶಾಲೆಯ ಆವರಣದಲ್ಲಿ ಅಡುಗೆ ಮಾಡಿದ್ದಾರೆ. ಊಟವಾದ ಬಳಿಕ ಶಾಲೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.


 ದುಷ್ಕರ್ಮಿಗಳು ಶಾಲೆಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಶಾಲೆಯೊಳಗಿದ್ದ ಬಿಸಿಯೂಟದ 40 ಕ್ಕೂ ಹೆಚ್ಚು ಅಕ್ಕಿ ಮೂಟೆ, ಬೇಳೆ ಸುಟ್ಟು ಭಸ್ಮವಾಗಿದೆ. ಕಚೇರಿಯೊಳಗಿದ್ದ ಕಂಪ್ಯೂಟರ್, ಸೈಕಲ್‌ಗಳು ಸುಟ್ಟು ಕರಕಲಾಗಿದೆ.
ದೇವದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News