45 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2016-01-01 18:14 GMT

ಎಂ.ಚಂದ್ರಶೇಖರ್-ಮಂಗಳೂರು ನಗರ ಪೊಲೀಸ್ ಆಯುಕ್ತ
ಬೆಂಗಳೂರು, ಜ. 1: ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್, ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಎನ್.ಎಸ್.ರೆಡ್ಡಿ ಸೇರಿದಂತೆ ಒಟ್ಟು 45 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ, ವರ್ಗಾವಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

 ಸೋನಿಯಾ ನಾರಂಗ್- ಸಿಐಡಿ ವಿಭಾಗದ ಡಿಜಿಪಿ, ಬಿಎನ್.ಎಸ್.ರೆಡ್ಡಿ-ಐಜಿಪಿ, ಪೊಲೀಸ್ ಅಕಾಡಮಿ ಮೈಸೂರು, ಎಂ.ಎನ್. ನಾಗರಾಜ್-ಎಸ್ಪಿ ಬಾಗಲಕೋಟೆ, ಪಿ.ಎಸ್.ಹರ್ಷ-ಡಿಸಿಪಿ, ಈಶಾನ್ಯ ವಿಭಾಗ, ವಿಕಾಸ್ ಕುಮಾರ್-ಎಸ್ಪಿ ಆಂತರಿಕ ಭದ್ರತೆ ಬೆಂಗಳೂರು, ಟಿ.ಡಿ.ಪವಾರ್-ಎಸ್ಪಿ, ಆಂತರಿಕ ಭದ್ರತೆ, ಕೌಶಲೇಂದ್ರ ಕುಮಾರ್- ಎಸ್ಪಿ, ಕೋಲಾರ.
ಆರ್.ದಿಲೀಪ್-ಐಜಿಪಿ, ಬೆಂಗಳೂರು ಅಪರಾಧ ವಿಭಾಗ, ಪಿ.ರಾಜೇಂದ್ರ ಪ್ರಸಾದ್-ಎಸ್ಪಿ, ಕೊಡಗು, ಆರ್.ರಮೇಶ್-ಎಸ್ಪಿ, ಲೋಕಾಯುಕ್ತ, ಎಂ.ಬಿ. ಬೋರಲಿಂಗಯ್ಯ-ಡಿಸಿಪಿ, ಆಗ್ನೇಯ ವಿಭಾಗ, ರೋಹಿಣಿ ಕಟೋಚ್ ಸೆಪಟ್-ಎಸ್ಪಿ, ವಿಶೇಷ ತನಿಖಾ ತಂಡ(ಎಸ್‌ಐಟಿ), ಎಸ್.ರವಿ-ಐಜಿಪಿ, ಕೆಎಸ್ಸಾರ್ಪಿ, ಎಂ.ಚಂದ್ರಶೇಖರ್-ನಗರ ಪೊಲೀಸ್ ಆಯುಕ್ತ ಮಂಗಳೂರು. ಬಿ.ಶಿವಕುಮಾರ್-ಐಜಿಪಿ ವಾಯವ್ಯ ವಲಯ, ಪ್ರೇಮಶಂಕರ ಮೀನಾ-ಡಿಜಿಪಿ ತರಬೇತಿ.

ಎಚ್.ಎನ್.ಸತ್ಯನಾರಾಯಣ ರಾವ್-ಡಿಜಿಪಿ ಕಾರಾಗೃಹ, ಪದ್ಮ ಕುಮಾರ್ ಗರ್ಗ್-ಡಿಜಿಪಿ ಪೊಲೀಸ್ ಗೃಹನಿರ್ಮಾಣ ಮಂಡಳಿ, ಕಮಲ್ ಪಂತ್- ಎಡಿಜಿಪಿ-ಕೆಎಸ್ಸಾರ್ಪಿ, ಭಾಸ್ಕರ್ ರಾವ್-ಎಡಿಜಿಪಿ ಅಪರಾಧ ಮತ್ತು ತಾಂತ್ರಿಕ ಸೇವೆ.
ಎಸ್.ಪರಶಿವಮೂರ್ತಿ-ಎಡಿಜಿಪಿ ಲೋಕಾಯುಕ್ತ, ಸುನಿಲ್ ಅಗರವಾಲ್- ಎಡಿಜಿಪಿ ಸಿಆರ್‌ಇ ಸೆಲ್, ಎನ್.ಶಿವಕುಮಾರ್-ಎಡಿಜಿಪಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಸಿ.ಎಚ್.ಪ್ರತಾಪ ರೆಡ್ಡಿ, ಎಡಿಜಿಪಿ ಸಿಐಡಿ, ಬೊರಸೆ ಭೂಷಣ್ ಗುಲಾಬ್ ರಾವ್-ಎಸ್ಪಿ ಸಿಐಡಿ, ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ- ಎಸ್ಪಿ ಮಂಡ್ಯ, ನಿಕ್ಕಂ ಪ್ರಕಾಶ್ ಅಮ್ರಿತ್-ಎಸ್ಪಿ ಬೀದರ್.

ಡಾ.ಭೀಮಾಶಂಕರ್-ಎಸ್ಪಿ ದಾವಣಗೆರೆ, ಧಮೇಂದ್ರ ಕುಮಾರ್ ಮೀನಾ-ಎಸ್ಪಿ ಧಾರವಾಡ, ಜಿ.ರಾಧಿಕಾ-ಎಸ್ಪಿ ಗುಪ್ತಚರ ವಿಭಾಗ, ಹರ್ಷಕುಮಾರ್ ಪಾಂಡೆ- ಎಸ್ಪಿ ಹಾಸನ, ಡಿ.ರೂಪಾ-ನಿರ್ದೇಶಕಿ ಸಕಾಲ ಮಿಷನ್, ಎನ್.ಶಿವಪ್ರಸಾದ್-ಡಿಐಜಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಚ್.ಎಸ್.ವೆಂಕಟೇಶ್-ಡಿಜಿಪಿ ರೈಲ್ವೆ ವಿಭಾಗ, ಕೆ.ಎಸ್.ಆರ್.ಚರಣ್ ರೆಡ್ಡಿ- ಎಸಿಪಿ- ಪಶ್ಚಿಮ ವಿಭಾಗ.
ಮಾಲಿನಿ ಕೃಷ್ಣಮೂರ್ತಿ-ಐಜಿಪಿ ಎಸ್‌ಐಟಿ, ಹಿತೇಂದ್ರ-ಐಜಿಪಿ-ಆಡಳಿತ ವಿಭಾಗ, ಕೆ.ವಿ.ಶರತ್ ಚಂದ್ರ-ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ), ಪಂಕಜ್ ಕುಮಾರ್-ಹೊಸದಿಲ್ಲಿ ಗುಪ್ತಚರ ವಿಭಾಗ, ಎಂ.ನಿಂಬಾಳ್ಕರ್ ಹೇಮಂತ್-ಐಜಿಪಿ ಸಿಐಡಿ, ಮನಿಷ್ ಕರಬೀಕರ್-ಡಿಐಜಿ, ಸೌಮೇಂದ್ರ ಮುಖರ್ಜಿ -ನಗರ ಪೊಲೀಸ್ ಆಯುಕ್ತ ಬೆಳಗಾವಿಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News