ಗ್ರಂಥಾಲಯಗಳಿಗೆ ಅನುದಾನ ನೀಡಲು ಅರ್ಜಿ ಆಹ್ವಾನ

Update: 2016-01-02 17:53 GMT

ಬೆಂಗಳೂರು, ಜ. 2: ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ 2015-16ನೆ ಸಾಲಿಗೆ ರಾಜ್ಯದ ಖಾಸಗಿ/ಅನುದಾನಿತ ಗ್ರಂಥಾಲಯಗಳಿಗೆ ಅನುದಾನ ಬಿಡುಗಡೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 ತಮ್ಮ ಸಮೀಪದ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಉಪ ನಿರ್ದೇಶಕರ/ಮುಖ್ಯ ಗ್ರಂಥಾಲಯಾಧಿಕಾರಿಗಳನ್ನು ಸಂಪರ್ಕಿಸಬೇಕು.
ಅವರಿಂದ ತಮ್ಮ ಗ್ರಂಥಾಲಯಗಳ ತಪಾಸಣೆ ಕೈಗೊಂಡ ನಂತರ ಜ.16ರ ಒಳಗಾಗಿ 2015-16ನೆ ಸಾಲಿಗೆ ಅನುದಾನ ಕೋರಿಕೆ ಮನವಿಯನ್ನು ಸಂಬಂಧಪಟ್ಟ ಉಪ ನಿರ್ದೇಶಕರ ಮುಖ್ಯ ಗ್ರಂಥಾಲಯಾಧಿಕಾರಿ ಮೂಲಕ ನಿರ್ದೇಶನಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News