ನಿರಂಜನ್‌ಕುಮಾರ್ ಕುಟುಂಬಕೆ್ಕ 30 ಲಕ್ಷ ರೂ. ಪರಿಹಾರ
ವಿಶ್ವದೆಲೆ್ಲಡೆ ಉಗ್ರವಾದ ದಮನವಾಗಬೇಕು: ಸಿದ್ದರಾಮಯ್ಯ
ಬೆಂಗಳೂರು, ಜ.4: ಭಾರತದಲ್ಲಿ ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕಲು ನಾವೆಲ್ಲರೂ ಒಂದಾಗಬೇಕು. ವಿಶ್ವದ ಎಲ್ಲೆಡೆ ಉಗ್ರವಾದ ದಮನವಾಗಬೇಕು. ಆಗ ಮಾತ್ರ ರಾಷ್ಟ್ರ ಹಾಗೂ ವಿಶ್ವದ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ನ್ಯೂ ಬಿಇಎಲ್ ಮೈದಾನದಲ್ಲಿ ಇರಿಸಲಾಗಿದ್ದ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನುಸುಳಿದ್ದ ಉಗ್ರರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಎನ್‌ಎಸ್‌ಜಿ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ (34) ಪಾರ್ಥಿವ ಶರೀರಕ್ಕೆ ರಾಜ್ಯ ಸರಕಾರದ ಪರವಾಗಿ ಗೌರವ ಅರ್ಪಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ‘ಸ್ನೇಹ-ಹಸ್ತ’ ಚಾಚಿ ಪಾಕಿಸ್ತಾನಕ್ಕೆ ಹಠಾತ್ ಭೇಟಿ ನೀಡಿದ ಏಳು ದಿನಗಳೊಳಗೆ, ಭಾರತದೊಳಗೆ ನುಸುಳಿದ ಉಗ್ರರ ಸದೆ ಬಡೆಯಲು ಏಳು ಮಂದಿ ಭಾರತದ ಯೋಧರು ವೀರ ಮರಣವಣ್ಣಪ್ಪಿದ್ದು ಅತ್ಯಂತ ನೋವು ಹಾಗೂ ದುಃಖದ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ವೀರ ಯೋಧರ ತ್ಯಾಗ-ಬಲಿದಾನಗಳಿಗೆ ಬೆಲೆಕಟ್ಟಲಾಗದು ಎಂದು ಗದ್ಗದಿತರಾದ ಸಿದ್ದರಾಮಯ್ಯ, ಈ ಹಿಂದೆ ಇಂತಹದೆ ಸಂದರ್ಭದಲ್ಲಿ ಪ್ರಾಣತೆತ್ತ ನಗರದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕುಟುಂಬಕ್ಕೆ ಪರಿಹಾರ ನೀಡಿದಂತೆಯೆ ನಿರಂಜನ್‌ಕುಮಾರ್ ಅವರ ಕುಟುಂಬಕ್ಕೂ 30 ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ‘ಸ್ನೇಹ-ಹಸ್ತ’ ಚಾಚಿ ಪಾಕಿಸ್ತಾನಕ್ಕೆ ಹಠಾತ್ ಭೇಟಿ ನೀಡಿದ ಏಳು ದಿನಗಳೊಳಗೆ, ಭಾರತದೊಳಗೆ ನುಸುಳಿದ ಉಗ್ರರ ಸದೆ ಬಡೆಯಲು ಏಳು ಮಂದಿ ಭಾರತದ ಯೋಧರು ವೀರ ಮರಣವಣ್ಣಪ್ಪಿದ್ದು ಅತ್ಯಂತ ನೋವು ಹಾಗೂ ದುಃಖದ ಸಂಗತಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ