ಗೋಹತ್ಯೆ ನಿಷೇಧ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ

Update: 2016-01-04 17:40 GMT

ಹುಬ್ಬಳ್ಳಿ, ಜ. 4: ಗೋಹತ್ಯೆ ನಿಷೇಧ ಕಾನೂನನ್ನು ಉಲ್ಲಂಘನೆ ಮಾಡು ವವರ ವಿರುದ್ಧ ಕಠಿಣ ಕ್ರಮ ಕೈಗೊ ಳ್ಳಲಾಗುವುದು ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಸಚಿವೆ ಮೇನಕಾಗಾಂಧಿ ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೋವುಗಳು ದೇಶದ ಸಂಸ್ಕೃತಿಯ ಪ್ರತೀಕವಾಗಿವೆ. ಅವುಗ ಳನ್ನು ಕೊಂದರೆ ನಮ್ಮ ಸಂಸ್ಕೃತಿಯನ್ನು ನಾಶ ಮಾಡಿದಂತೆ. ಹೀಗಾಗಿ ದೇಶದ ಜನತೆ ಗೋಹತ್ಯೆ ಮಾಡಬಾರದು. ಮಾಡು ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕರ್ನಾಟಕದಲ್ಲಿ ಮಕ್ಕಳನ್ನು ಕಾನೂನುಬಾಹಿರವಾಗಿ ದತ್ತು ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಸುಮಾರು 6 ಸಾವಿರ ದತ್ತು ಉಲ್ಲಂಘನೆಯಾಗಿದ್ದು, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
  ಹತ್ತು ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತ ರನ್ನು ಮೇಲ್ವಿಚಾರಕರಾಗಿ ಬಡ್ತಿ ನೀಡಲಾಗುವುದು. ಪ್ರತೀ ಗ್ರಾಮಗಳಲ್ಲಿಯು ಮಹಿಳಾ ಸ್ವಯಂ ಸೇವಕರನ್ನು ನೇಮಿಸಿಕೊಂಡು ಗೌರವಧನ ನೀಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News