ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಎಸ್.ಅಬ್ದುಲ್ ನಝೀರ್

Update: 2016-01-04 17:40 GMT

ಬೆಂಗಳೂರು, ಜ.4: ತಮ್ಮ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅನಾಮಧೇಯ ಪತ್ರ ಬರೆಯಲಾಗಿದೆ ಎಂಬ ಕಾರಣಕ್ಕೆ ಅಮಾನತ್ ಬ್ಯಾಂಕ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅವರು ಪ್ರಕರಣದ ವಿಚಾರಣೆ ಕೈಬಿಟ್ಟಿದ್ದಾರೆ.
  ಸೋಮವಾರ ಬೆಳಗ್ಗೆ ಪ್ರಕರಣವನ್ನು ವಿಚಾರಣೆಗೆ ಕೂಗಿದಾಗ ನ್ಯಾಯಮೂರ್ತಿ ನಝೀರ್ ಅವರು, ಈ ಪ್ರಕರಣ ದ ವಿಚಾರಣೆಯಲ್ಲಿ ನನ್ನ ನೀಯತ್ತಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ನನಗೆ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಕೆಲವರು ಅನಾ ಮಧೇಯ ಪತ್ರ ಬರೆದಿದ್ದಾರೆ. ಇದರಿಂದ ನನಗೆ ನೋವಾಗಿದೆ. ಹೀಗಾಗಿ, ಈ ಪ್ರಕರಣದ ವಿಚಾರಣೆಯನ್ನು ನಾನು ನಡೆಸು ವುದಿಲ್ಲ. ಇದು ಮುಖ್ಯ ನ್ಯಾಯಮೂರ್ತಿಗಳು ಸೂಚಿಸುವ ಪೀಠದ ಮುಂದೆಯೇ ಬರಲಿ ಎಂದು ಆದೇಶಿಸಿ ದರು.
 ನಷ್ಟದಲ್ಲಿರುವ ಬ್ಯಾಂಕಿನ ಪುನಃಶ್ಚೇತನದ ನಿಟ್ಟಿನಲ್ಲಿ ನಾವೀಗಾಗಲೇ ರಿಸರ್ವ್ ಬ್ಯಾಂಕ್ ಸೂಚನೆಯ ಅನುಸಾರ ವಸೂಲಿ ಮಾಡಬೇಕಾದ ಹಣದಲ್ಲಿ ಒಟ್ಟ 197 ಕೋಟಿ ವಸೂಲಿ ಮಾಡಿದ್ದೇವೆ. ಇನ್ನೊಂದು 23 ಕೋಟಿ ಭರ್ತಿ ಮಾಡಿದ್ರೆ ಬ್ಯಾಂಕ್ ಪುನರಾರಂಭಗೊಳ್ಳಲು ಸಶಕ್ತವಾಗುತ್ತದೆ. ಹೀಗಾಗಿ, ಇದಕ್ಕಾಗಿ ನಿರ್ದೇಶನ ನೀಡಬೇಕು ಎಂದು ಕೋರಿ ಬ್ಯಾಂಕ್ ಪರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ನಝೀರ್ ಅವರು ಸೋಮವಾರ ನಡೆಸಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News