ಆರ್‌ಟಿಇ ಕಾಯ್ದೆ ಹಿಂಪಡೆದರೆ ಉಗ್ರ ಹೋರಾಟ: ಎಚ್ಚರಿಕೆ

Update: 2016-01-04 17:41 GMT

ಬೆಂಗಳೂರು, ಜ. 4: ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡು ಆರ್‌ಟಿಇ ಕಾಯ್ದೆಯಡಿ ಬಡ ಮಕ್ಕಳಿಗೆ ನೀಡಲಾಗುತ್ತಿರುವ ಖಾಸಗಿ ಶಾಲೆಗಳಲ್ಲಿನ ಶೇ.25 ರಷ್ಟು ಮೀಸಲಾತಿಯನ್ನು ಹಿಂಪಡೆಯಲು ಮುಂದಾಗಿರುವ ಕ್ರಮಕ್ಕೆ ಆಪ್ ರಾಜ್ಯ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
 
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆಪ್‌ರಾಜ್ಯ ಸಹ ಸಂಚಾಲಕ ಶಿವಕು ಮಾರ್ ಮಾತನಾಡಿ, ಸರಕಾರದ ಈ ದುರ್ನಡೆಯಿಂದಾಗಿ ರಾಜ್ಯದಲ್ಲಿ ಆರ್‌ಟಿಇ ಪ್ರಯೋಜನ ಪಡೆಯುತ್ತಿರುವ ಸುಮಾರು 1ಲಕ್ಷ ಮಕ್ಕಳ ಭವಿಷ್ಯವನ್ನು ಬೀದಿಗೆ ತಳ್ಳಿದಂತಾಗಿದೆ. ಶಿಕ್ಷಣ ಇಂದು ವ್ಯಾಪಾರೀಕರಣವಾಗಿದ್ದು, ಶೈಕ್ಷಣಿಕ ಸಂಸ್ಥೆ ಗಳು ರಾಜಕಾರಣಿಗಳ ಹಿಡಿತದಲ್ಲಿವೆ. ಇವರಿಂದ ಬಡ ಮಕ್ಕಳಿಗೆ ಏನೂ ಉಪಯೋಗವಿಲ್ಲ. ಸರಕಾರ ಆರ್‌ಟಿಇ ಕಾಯ್ದೆ ಹಿಂಪಡೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲ್ಲಿ ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News