ದ್ವಿತೀಯ ಇಲಾಖಾ ಪರೀಕ್ಷೆ ಫಲಿತಾಂಶ ಪ್ರಕಟ
ಬೆಂಗಳೂರು, ಜ. 4: ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ.
ಫಲಿತಾಂಶಕ್ಕಾಗಿ ಆಯೋಗದ ವೆಬ್‌ಸೈಟ್ ನ್ನು ನೋಡಬಹುದು. ಪರೀಕ್ಷೆಯಲ್ಲಿಅನುತ್ತೀರ್ಣರಾದ ಅಭ್ಯರ್ಥಿಗಳು ಅಂಕಗಳ ಮರುಎಣಿಕೆಗಾಗಿ ಫಲಿತಾಂಶ ಪ್ರಕಟವಾದ ದಿನಾಂಕದಿಂದ 30 ದಿನಗಳೊಳಗಾಗಿ ನಿಗದಿತ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಪ್ರಸಕ್ತ ಸಾಲಿನಲ್ಲಿ ನಡೆಸುವ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಅರ್ಹ ಸರಕಾರಿ ನೌಕರರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಫೆ.2ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ತತ್ಸಂಬಂದ ಶುಲ್ಕವನ್ನು ಸ್ಕಾನರ್ ಸೌಲಭ್ಯವಿರುವ ರಾಜ್ಯದ ಯಾವುದೇ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಫೆ.3 ರವರೆಗೆ ಪಾವತಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಆಯೋಗದ ವೆಬ್‌ಸೈಟ್ //ಠಿಠಿ://ಠ್ಚ.ಚ್ಟ.್ಞಜ್ಚಿ ಮತ್ತು ದೂರವಾಣಿ ಸಂಖ್ಯೆ 080-30574944,30574945,30574957 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.