×
Ad

ನಿವೇಶನ ಪ್ರಕರಣ: ಬಿಡಿಎಗೆ ವಾಪಸ್ ನೀಡಲು ಹೈಕೋರ್ಟ್ ಸೂಚನೆ

Update: 2016-01-04 23:29 IST

ಬೆಂಗಳೂರು, ಜ.4: ಶಂಕರ್‌ನಗರ ಕ್ಲಬ್‌ಗೆ ನಿಯಮ ಉಲ್ಲಂಘಿಸಿ ನೀಡಿದ್ದ ಸಿಎ ನಿವೇಶನವನ್ನು ವಾಪಸ್ ಪಡೆಯುವಂತೆ ಬಿಡಿಎಗೆ ಹೈಕೋರ್ಟ್ ಸೂಚನೆ ನೀಡಿದೆ.
ಎಂ.ಎನ್.ಬಸವರಾಜು ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ದ್ವಿಸದಸ್ಯತ್ವ ಪೀಠ ಈ ಆದೇಶ ನೀಡಿದೆ. ಬಿಡಿಎ ನಿಯಮಗಳನ್ನು ಉಲ್ಲಂಘಿಸಿ ಬಿಡಿಎ ಶಂಕರ್ ನಗರ ಕ್ಲಬ್‌ಗೆ ಸಿಎ ನಿವೇಶನವನ್ನು ನೀಡಿದ್ದು ಕಾನೂನುಬಾಹಿರ ವಾಗಿರುತ್ತದೆ. ಈ ನಿವೇಶನವನ್ನು ನೀಡುವಾಗ ದಿನಪತ್ರಿಕೆಯಲ್ಲಿ ಸಾರ್ವಜನಿಕವಾಗಿ ಜಾಹೀರಾತನ್ನು ಪ್ರಕಟಿಸಬೇಕಾಗಿತ್ತು. ಆದರೆ, ಅದನ್ನು ಪ್ರಕಟಿಸಿಲ್ಲ. ಹೀಗಾಗಿ, ಶಂಕರ್‌ನಗರ ಕ್ಲಬ್‌ನವರು ಸಿಎ ನಿವೇಶನ ಹಾಗೂ ಶೇ.6ರ ಬಡ್ಡಿ ಹಣವನ್ನು ಸೇರಿಸಿ ಬಿಡಿಎಗೆ ನೀಡಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News