×
Ad

ಶಾಸಕರ ನಿಧಿ ದುರ್ಬಳಕೆ: ತನಿಖೆಗೆ ಸಿಪಿಎಂ ಒತ್ತಾಯ

Update: 2016-01-04 23:49 IST

ಕುಂದಾಪುರ, ಜ.4: ನಾಡ-ಸೇನಾಪುರ ರಸ್ತೆ ಮರು ಡಾಮರು ಕಾಮಗಾರಿಯು ಕಳಪೆಯಾಗಿದ್ದು, ಇದರಲ್ಲಿ ಶಾಸಕರ ನಿಧಿಯನ್ನು ದುರುಪಯೋಗಪಡಿಸಲಾಗಿದೆ ಎಂದು ಸಿಪಿಎಂ ಬೈಂದೂರು ವಲಯ ಸಮಿತಿ ಆರೋಪಿಸಿದೆ.
ಹಲವು ವರ್ಷಗಳಿಂದ ನಾಡ- ಸೇನಾಪುರ ರಸ್ತೆ ನಾದುರಸ್ತಿಯಲ್ಲಿದ್ದು, ಇದರಲ್ಲಿ ಜನರು ಪ್ರಯಾಣಿಸಲು ತೊಂದರೆ ಅನುಭವಿಸುತ್ತಿದ್ದರು. ಸಮಸ್ಯೆ ಪರಿಹರಿಸುವಂತೆ ಸಿಪಿಎಂ ಹೋರಾಟ ನಡೆಸಿ ಮನವಿ ನೀಡಿದ ನಂತರ ಶಾಸಕರ ನಿಧಿಯಿಂದ ಮರುಡಾಮರು ಕಾಮಗಾರಿ ಇದೀಗ ನಡೆಸಲಾಗುತ್ತಿದೆ ಎಂದು ಸಿಪಿಎಂ ತಿಳಿಸಿದೆ.
 ಕಾಮಗಾರಿಗೆ 20ಎಂಎಂ, 10ಎಂಎಂ, 06ಎಂಎಂ ಜೆಲ್ಲಿ ಮಿಶ್ರಣ ಮಾಡಿ ಮಾಡಬೇಕಾದ ರಸ್ತೆ ಕಾಮಗಾರಿಯನ್ನು ಕೇವಲ 10 ಎಂಎಂ ಮತ್ತು 06 ಎಂಎಂ ಮಾತ್ರ ಮಿಶ್ರಣ ಮಾಡಿ ಕಳಪೆ ಕಾಮಗಾರಿ ಮಾಡಿ ಜನರ ಹಣ ಲೂಟಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯು ನಿಧಿ ದುರ್ಬಳಕೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಿಪಿಎಂ ಬೈಂದೂರು ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News