×
Ad

ಖಾಸಗಿ ಕಂಪೆನಿಯವರ ಸೇವಾವಧಿ ವಿಸ್ತರಣೆ: ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2016-01-06 23:13 IST

ಬೆಂಗಳೂರು, ಜ.6: ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವವರ ಸೇವಾವಧಿಯನ್ನು 58ರಿಂದ 60ಕ್ಕೆ ಏರಿಸಬೇಕೆಂಬ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ.
  ಮ್ಯಾನೇಜ್‌ಮೆಂಟ್ ಆಫ್ ಫೆಡರಲ್ ಮೊಗಲ್ ಇಂಡಿಯಾ ಪ್ರೈ.ಲಿ.ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ.
    ಇದೇ ಮೊಗಲ್ ಇಂಡಿಯಾ ಪ್ರೈ.ಲಿ.ಕಂಪೆನಿಯು ಹೊಸದಿಲ್ಲಿಯಲ್ಲೂ ಇದ್ದು, ಆ ಕಂಪೆನಿಯಲ್ಲಿ ಕೆಲಸ ಮಾಡುವವರ ಸೇವಾವಧಿ 60 ವರ್ಷವಿದೆ. ಅದೇ ರೀತಿಯಾಗಿ ಯಲಹಂಕದಲ್ಲಿರುವ ಕಂಪೆನಿಯ ಕೆಲಸಗಾರರ ಸೇವಾವಧಿಯನ್ನು ಹೆಚ್ಚಿಸಬೇಕೆಂಬ ವಾದವನ್ನು ಮಂಡಿಸಿದರು. ನ್ಯಾಯಮೂರ್ತಿ ವಕೀಲರ ವಾದ ಪ್ರತಿವಾದವನ್ನು ಆಲಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು.
         

ಯಲಹಂಕದಲ್ಲಿರುವ ಕಂಪೆನಿಯಲ್ಲಿ ಒಟ್ಟು 2500 ಜನರು ಕೆಲಸ ಮಾಡುತ್ತಿದ್ದರು. ಈಗ ಅದರಲ್ಲಿ 500 ಜನರ ವಯಸ್ಸು 58 ದಾಟಿದ್ದರಿಂದ ಕಾನೂನು ಪ್ರಕಾರ ಕಂಪೆನಿಯು ಅವರಿಗೆ ನಿವೃತ್ತಿಯನ್ನು ಘೋಷಿಸಿದೆ. ಹೀಗಾಗಿ, ಇವರುಗಳು ಈ ನಿರ್ಣಯವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News