×
Ad

ಮಾಜಿ ದೇವದಾಸಿಯರ ವಸತಿ ಗೃಹ ನಿರ್ಮಾಣ ವೆಚ್ಚ ಹೆಚ್ಚಳ

Update: 2016-01-06 23:14 IST

ಬೆಂಗಳೂರು, ಜ. 6: ಮಾಜಿ ದೇವದಾಸಿಯರ ವಸತಿ ಗೃಹ ನಿರ್ಮಾಣದ ವೆಚ್ಚವನ್ನು ಹೆಚ್ಚಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ 1.20ಲಕ್ಷ ರೂ.ಗಳಿಂದ 1.50ಲಕ್ಷ ರೂ.ಗಳಿಗೆ ಹಾಗೂ ನಗರ ಪ್ರದೇಶಗಳಲ್ಲಿ 1.20ಲಕ್ಷ ರೂ.ನಿಂದ 1.80ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಈ ಸಂಬಂಧ ಸರಕಾರಿ ಆದೇಶ ಹೊರಡಿಸಲಾಗಿದ್ದು, 2015 ಮತ್ತು 2016ನೆ ಸಾಲಿನಿಂದ ಈ ಹೆಚ್ಚಳವು ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ 833 ಫಲಾನುಭವಿಗಳು ಹಾಗೂ ನಗರ ಪ್ರದೇಶದ 417ಫಲಾನುಭವಿಗಳಿಗೆ ಈ ಆದೇಶದಿಂದ ಪ್ರಸಕ್ತ ವರ್ಷ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ರಾಜ್ಯ ಸರಕಾರ 12ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಸಚಿವೆ ಉಮಾಶ್ರೀ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News