ಜ.12ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಜ.8: ಕರ್ನಾಟಕ ಪೊಲೀಸ್ ಕಾಯ್ದೆ-36ನ್ನು ರದ್ದುಪಡಿಸುವ ಹಾಗೂ ತಿದ್ದುಪಡಿ ಸಂಬಂಧ ಸರಕಾರಿ ಪರ ವಕೀಲರು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಕರಣ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಮಂಗಳಮುಖಿಯರ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯ ಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯ ಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠ, ಈ ಆದೇಶವನ್ನು ನೀಡಿದೆ. ಮಂಗಳಮುಖಿಯರ ಪರ ವಾದ ಮಂಡಿಸಿದ ವಕೀಲರು ಮಂಗಳಮುಖಿಯರು ಹುಡುಗ ಮತ್ತು ಹುಡುಗಿಯರನ್ನು ಕಿಡ್ನಾಪ್ ಮಾಡಿ ಅವರನ್ನು ಲಿಂಗ ಪರಿವರ್ತನೆ ಮಾಡುತ್ತಾ ರೆಂಬ ಆರೋಪವಿದ್ದು, ಅವರುಗಳು ಕರ್ನಾಟಕ ಪೊಲೀಸ್ ಕಾಯ್ದೆ- 36ರ ಪ್ರಕಾರ ವಾರ ಹಾಗೂ ತಿಂಗಳಿಗೊಮ್ಮೆ ಹತ್ತಿರದ ಪೊಲೀಸ್ ಠಾಣಾಗಳಿಗೆ ಭೇಟಿ ನೀಡಿ ಸಹಿ ಮಾಡಿ ಬರಬೇಕಾಗಿದೆ. ಇದರಿಂದ, ಅವರಿಗೆ ಕಿರಿಕಿರಿಯಾಗುತ್ತಿದ್ದು, ಈ ಕಾಯ್ದೆಯನ್ನು ರದ್ದುಪಡಿಸಿ ಅಥವಾ ಈ ಕಾಯ್ದೆಗೆ ತಿದ್ದುಪಡಿಯನ್ನು ತರಬೇ ಕೆಂಬ ವಾದವನ್ನು ಮಂಡಿಸಿದರು. ಸರಕಾರಿ ಪರ ವಕೀಲರು ವಾದ ಮಂಡಿಸಿ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚಿಸಲು ಸಮಯಾವಕಾಶ ಕೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.