ಕಾರ್ಕಳದಲ್ಲಿ ತಾಲೂಕು ಸಮಿತಿ ಸಭೆ : ಸಮ್ಮೇಳನಕ್ಕೆ ಸಂಪೂರ್ಣ ಸಹಕಾರದ ಭರವಸೆ
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಜನವರಿ,30-2016 ರಂದು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡಿರುವ ' ಸಹಬಾಳ್ವೆಯ ಸಾಗರ' ರಾಷ್ಟ್ರೀಯ ಸಮ್ಮೇಳನದ ಕುರಿತಾದಮಾಹಿತಿ ವಿನಿಮಯ ಮತ್ತು ಕಾರ್ಕಳ ಭಾಗದವರನ್ನು ಒಳಗೊಳ್ಳುವ ಸಲುವಾಗಿ ಕಾರ್ಕಳ ತಾಲೂಕು ಸಮಿತಿ ರಚನೆಯ ಉದ್ದೇಶದಿಂದ (ಜನವರಿ,9-2016, ಶನಿವಾರ ) ಬೆಳಿಗ್ಗೆ 10.30 ಕ್ಕೆಸುಧೀಂದ್ರ ಕಾಂಪ್ಲೆಕ್ಸಿನ ನವೀನ್ ರಾವ್ ಅವರ ಕಛೇರಿಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಶುಭದ ರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿ.ರಾಜಶೇಖರ್, ದಿನಕರ್ ಎಸ್.ಬೆಂಗ್ರೆ, ಕಾರ್ಕಳ ತಾಲೂಕಿನ ವಿವಿಧಸಂಘಟನೆಗಳಾದ ಸೌಹಾರ್ದ ವೇದಿಕೆ, ಕೆಥೋಲಿಕ್ ಸಭಾ, ಮುಸ್ಲಿಮ್ ಒಕ್ಕೂಟ, ಅಲ್ಪ ಸಂಖ್ಯಾತ ವೇದಿಕೆಯ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ನವೀನ್ ರಾವ್,ಅಬ್ದುಲ್ ರಶೀದ್, ಫಾರೂಕ್, ಸೊಲೋಮನ್, ಲೀನಾ ಮಿನೇಜಸ್, ಚೇತನ್ ರಾವ್, ರಾಜಾರಾಮ್ ಕಾಮತ್, ಸಂತೋಷ್, ರವಿ ಕುಮಾರ್, ರಾಜೇಶ್ ಜೈನ್, ಸುನೀಲ್ ಕೋಟ್ಯಾನ್,ಸುಧೀಂದ್ರ ರಾವ್ ಮತ್ತಿತರರು ಭಾಗವಹಿಸಿದ್ದರು.
ಸಮ್ಮೇಳನದ ಕುರಿತಾಗಿ ದಿನಕರ ಎಸ್,ಬೆಂಗ್ರೆ ಮಾತನಾಡಿದರು, ವೇದಿಕೆಯ ಬಗ್ಗೆ ಜಿ.ರಾಜಶೇಖರ್ ಮಾತನಾಡಿ ನಮ್ಮ ಸೌಹಾರ್ದ ಪರಂಪರೆಯ ಕರಾವಳಿಯ ಬದುಕನ್ನು ಉಳಿಸಿಕೊಳ್ಳಲುಮತ್ತು ಎತ್ತಿಹಿಡಿಯಲು ಜನರೇ ಮುಂದಾಗಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಈ ಸಮ್ಮೇಳನದ ಮೂಲಕ ನಾವು ರಾಷ್ಟ್ರಕ್ಕೆ ಕರಾವಳಿಯ ಸೌಹಾರ್ದತೆಯನ್ನು ಸಾರಿ ಹೇಳಬೇಕಿದೆಎಂದರು.
ತಾಲೂಕಿನಿಂದ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದ ಕಾರ್ಕಳ ತಾಲೂಕು ಸಮಿತಿಯಕಾರ್ಯಕರ್ತರು ಮುಂದಿನ ದಿನಗಳಲ್ಲಿ ವೇದಿಕೆಯ ನೇತೃತ್ವದಲ್ಲಿ ಕಾರ್ಕಳದಲ್ಲೂ ಸಹಬಾಳ್ವೆ, ಸೌಹಾರ್ದತೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಭರವಸೆನೀಡಿದರು.
ಶುಭದರಾವ್ ಸ್ವಾಗತಿಸಿ, ನವೀನ್ ರಾವ್ ವಂದಿಸಿದರು.