×
Ad

ಕರಾವಳಿ ಕಾವಲು ಪೊಲೀಸ್ ಅಧಿಕಾರವ್ಯಾಪ್ತಿ ಹೆಚ್ಚಳ

Update: 2016-01-11 23:45 IST

ಕಾರವಾರ, ಜ.11: ಕರಾವಳಿ ಕಾವಲು ಪೊಲೀಸ್, ಮಲ್ಪೆ-ಉಡುಪಿ ಘಟಕದ 9 ಕರಾವಳಿ ಕಾವಲು ಪೊಲೀಸ್ ಠಾಣೆಗಳ ವ್ಯಾಪ್ತಿ ಮತ್ತು ಕಾಯ್ದೆಗಳಡಿ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
ಈಗಾಗಲೇ ನೀಡಿದ್ದ 15ಕಾಯ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಈ ಕೆಳಕಂಡ ಕಾಯ್ದೆಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲು ಕರಾವಳಿ ಕಾವಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್-1973, ಇಂಡಿಯನ್ ಪೀನಲ್ ಕೋಡ್ 1860, ಪ್ರಿವೆನ್‌ಶನ್ ಆಫ್ ಅನ್‌ಲಾಫುಲ್ ಆಕ್ಟಿವಿಟೀಸ್ 1967, ಕರ್ನಾಟಕ ಪ್ರಿವೆನ್‌ಶನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಫ್ ಪ್ರಾಪರ್ಟಿ ಆಕ್ಟ್ 1981, ಮೆರಿಟೈಮ್ ಜೋನ್ ಆಫ್ ಇಂಡಿಯಾ ಆಕ್ಟ್ 1981, ಇಂಡಿಯನ್ ಫಿಶರೀಸ್ ಆಕ್ಟ್ 1962: ಸೆಕ್ಷನ್ 100ರಿಂದ 127, ದಿ ವೆಪನ್ ಆಫ್ ಮಾಸ್ ಡಿಸ್ಟ್ರಕ್ಷನ್ ಆ್ಯಂಡ್ ದೆಯರ್ ಡೆಲಿವರಿ ಸಿಸ್ಟಮ್ ಆಕ್ಟ್ 2005, ಕರ್ನಾಟಕ ಪೊಲೀಸ್ ಆಕ್ಟ್ 1963, ಇನ್ಫಾರ್ಮೇಶನ್ ಟೆಕ್ನಾಲಜಿ ಆಕ್ಟ್ 2000. ಸದರಿ ಹೆಚ್ಚುವರಿ ಕಾಯ್ದೆಗಳಡಿಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಪೊಲೀಸ್ ಅಧೀಕ್ಷಕರು, ಕರಾವಳಿ ಕಾವಲು ಪೊಲೀಸ್ ಉಡುಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News