×
Ad

ದುರುದ್ದೇಶದಿಂದ ಬೆಂಗಳೂರು ವಿವಿ ವಿಭಜನೆ: ಅರವಿಂದ ಲಿಂಬಾವಳಿ

Update: 2016-01-12 22:35 IST

ಬೆಂಗಳೂರು, ಜ.12: ರಾಜ್ಯ ಸರಕಾರವು ದುರುದ್ದೇಶದಿಂದ ಬೆಂಗಳೂರು ವಿಶ್ವ ವಿದ್ಯಾನಿಲಯವನ್ನು ವಿಭಜಿಸಲು ಹೊರಟಿದೆ. ರಾಜಕೀಯ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರದಲ್ಲಿ ವಿಭಜನೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಮಾರತ್ತಹಳ್ಳಿಯಲ್ಲಿ ಮಹದೇವಪುರ ಸ್ನೇಹ ಸೌರಭ ವೇದಿಕೆ ಆಯೋ ಜಿಸಿದ್ದ ಬೆಂಗಳೂರು ವಿವಿ ನೂತನ ಸಿಂಡಿಕೇಟ್ ಸದಸ್ಯ ಜಯಚಂದ್ರ ರೆಡ್ಡಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾನಿಲಯ ದೇಶ, ವಿದೇಶಗಳಲ್ಲಿ ತನ್ನ ಶಿಕ್ಷಣದ ಗುಣಮಟ್ಟ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಇತರ ವಿವಿಗಳಿಗೆ ಮಾದರಿಯಾಗಿದೆ. ಮಾಹಿತಿ ತಂತ್ರಜ್ಞಾನದ ಜೊತೆಗೆ ಇಂದು ಬೆಂಗಳೂರು ‘ಉನ್ನತ ಶಿಕ್ಷಣದ ಜಾಗತಿಕ ಕೇಂದ್ರ’ವಾಗಿ ಖ್ಯಾತಿಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.
ವಿಶ್ವದ ವಿವಿಗಳ ರ್ಯಾಂಕಿಂಗ್‌ನಲ್ಲಿ ದೇಶದ ಐಐಟಿಗಳು 200ನೆ ರ್ಯಾಂಕ್‌ನಲ್ಲಿವೆ. ಬೆಂಗಳೂರು ವಿವಿಯನ್ನು ವಿಶ್ವರ್ಯಾಂಕ್ ಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೇರಿಸಲು ತಮ್ಮ ಅವಧಿಯಲ್ಲಿ ತಜ್ಞರ ಸಮಿತಿ ಗಳನ್ನು ರಚಿಸಿ ಸಲಹೆ ಸೂಚನೆ ಗಳನ್ನು ಪಡೆದು ಶ್ರಮಿಸ ಲಾಯಿತು. ಹಣಕಾಸಿನ ಕೊರತೆ ಯಿಂದ ಇದು ವಿಫಲ ವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿವಿಗಳ ಸಿಂಡಿಕೇಟ್ ಸದಸ್ಯರು ನಿಷ್ಪಕ್ಷಪಾತ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ಮೂಲಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಗಮನ ಹರಿಸಬೇಕು ಎಂದು ಅರವಿಂದ ಲಿಂಬಾವಳಿ ಸಲಹೆ ನೀಡಿದರು. ಉಪಕುಲಪತಿ ಪ್ರೊ.ಬಿ.ತಿಮ್ಮೇಗೌಡ ಮಾತನಾಡಿ, ಎಲ್ಲ್ಲ ರಂಗದಲ್ಲಿ ವೈಜ್ಞಾನಿಕವಾಗಿ, ಗುಣಾತ್ಮಕವಾಗಿ ಬೆಳೆಯುವ ಆವಶ್ಯಕತೆ ಇವೆ. ಶಿಕ್ಷಣದ ಜೊತೆಗೆ ವೈಚಾರಿಕ ಪ್ರಜ್ಞೆ ಮೂಡಿಸುವ ಮೂಲಕ ಯುವಸಮುದಾಯದ ಸಮಗ್ರ ಬೆಳವಣಿಗೆಗೆ ಕಾರಣವಾಗಬೇಕಿದೆ ಎಂದರು.
ಬೆಂಗಳೂರು ವಿವಿ ಮುಂದಿನ ಶೈಕ್ಷಣಿಕ ವರ್ಷದಿಂದ ಮೂರು ವಿಭಾಗ ವಾಗಲಿದೆ. ಇದು ಸರಕಾರದ ತೀರ್ಮಾನವಾಗಿದ್ದು, ನಾವು ಮಧ್ಯ ಪ್ರವೇ ಶಿಸುವಂತಿಲ್ಲ. ತಮ್ಮ ಸೇವಾ ಅವಧಿ ಇನ್ನು 13 ತಿಂಗಳು ಮಾತ್ರವಿದೆ. ಈ ಅವಧಿಯಲ್ಲಿ ಎಲ್ಲರ ಸಹಕಾರ ಬಯಸುತ್ತೇನೆ ಎಂದರು.

ಸಿಂಡಿಕೇಟ್ ಸದಸ್ಯರಾದ ಅರುಣಾ ಕುಮಾರಿ, ರವಿಕುಮಾರ್, ಸಂಜೀವರೆಡ್ಡಿ, ಜಯಣ್ಣ, ಡ್ಯಾನಿಯಲ್ ಫೆರ್ನಾಂಡಿಸ್, ನಾತಾಲಿಯಾ ಮತ್ತಿತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ.ಸಿ.ರಾಮಮೂರ್ತಿ, ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಕೆ.ಹರೀಶ್, ವೇದಿಕೆಯ ಅಧ್ಯಕ್ಷ ಪಿ.ಎ.ವೆಂಕಟಸ್ವಾಮಿರೆಡ್ಡಿ, ಪಾಲಿಕೆ ಮಾಜಿ ಸದಸ್ಯ ಎನ್.ಆರ್. ಶ್ರೀಧರ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News