×
Ad

ಭಾಷಾಂತರಕಾರರ ಹುದ್ದೆಗಳನ್ನೇಕೆ ಭರ್ತಿ ಮಾಡಿಲ್ಲ: ಹೈಕೋರ್ಟ್

Update: 2016-01-18 23:03 IST

ಬೆಂಗಳೂರು, ಜ.18: ಹೈಕೋರ್ಟ್‌ಗೆ ಭಾಷಾಂತ ರಕಾರರ ಹುದ್ದೆಗಳನ್ನು ಏಕೆ ತುಂಬಿಲ್ಲ ಎಂದು ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಸರಕಾರವನ್ನು ಪ್ರಶ್ನಿಸಿದ್ದಾರೆ.
ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ. ಅಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರಕಾರಕ್ಕೆ ಈ ಪ್ರಶ್ನೆಯನ್ನು ಹಾಕಿದರು. ಸರಕಾರಿ ಅಡ್ವೊಕೇಟ್ ಜನರಲ್ ಮಧುಸೂದನ್ ಆರ್. ನಾಯಕ್ ವಾದ ಮಂಡಿಸಿ ಸದ್ಯ ಸುಭಾಷ್ ಬಿ.ಅಡಿಗೆ ಸಂಬಂಧಿಸಿದ ಕಡತಗಳನ್ನು ಭಾಷಾಂತರಗೊಳಿಸಲಾಗಿದ್ದು,ಉಳಿದ ಕಡತಗಳನ್ನೂ ಭಾಷಾಂತರಗೊಳಿಸಲಾಗುವುದು ಎಂಬ ವಾದವನ್ನು ಮಂಡಿಸಿದರು. ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಿ ಭಾಷಾಂತರಕಾರರ ಕೊರತೆಯಿ ದ್ದಿದ್ದರಿಂದ ನ್ಯಾ.ಸುಭಾಷ್ ಬಿ. ಅಡಿಗೆ ಸಂಬಂಧಿಸಿದ ಕಡತಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿಲ್ಲ. ಅಲ್ಲದೆ, ಹೈಕೋರ್ಟ್‌ನಲ್ಲಿ 9 ಭಾಷಾಂತರಕಾರರ ಹುದ್ದೆಗಳು ಖಾಲಿಯಿವೆ ಎಂಬ ಅಂಶಗಳನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಇಬ್ಬರು ವಾದವನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.21ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News