ಎಚ್‌ಎಂಟಿ ಜಾಗ ಹರಾಜು ಆದೇಶಕ್ಕೆ ಹೈಕೋರ್ಟ್ ತಡೆ

Update: 2016-01-18 17:40 GMT

ಬೆಂಗಳೂರು, ಜ.18: ಕಾರ್ಮಿಕರಿಗೆ ಗ್ರಾಚ್ಯುಟಿ ಮೇಲಿನ 26 ಲಕ್ಷ ರೂ.ಬಡ್ಡಿ ವೌಲ್ಯವನ್ನು ಪಾವತಿಸದ ಹಿನ್ನೆಲೆಯಲ್ಲಿ ಎಚ್‌ಎಂಟಿ ಮೆಷಿನ್ ಟೂಲ್ಸ್‌ಗೆ ಸೇರಿದ ಜಾಗವನ್ನು ಹರಾಜು ಹಾಕಲು ಆದೇಶಿಸಿದ್ದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
   ಎಚ್‌ಎಂಟಿ ಮೆಷಿನ್ ಟೂಲ್ಸ್ ಜನರಲ್ ಮ್ಯಾನೇಜರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಎಚ್‌ಎಂಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗ್ರಾಚ್ಯುಟಿ ಮೇಲಿನ 26 ಲಕ್ಷ ರೂ.ಬಡ್ಡಿ ವೌಲ್ಯವನ್ನು ಪಾವತಿಸಿಲ್ಲವೆಂಬ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ ಎಚ್‌ಎಂಟಿಗೆ ಸೇರಿದ 5.9 ಗುಂಟೆ ಜಾಗ (200 ಕೋಟಿ ವೌಲ್ಯ)ವನ್ನು ಜ.29ರಂದು ಹರಾಜು ಹಾಕಲು ಆದೇಶಿಸಿದ್ದರು.
  ಆದರೆ, ಹೈಕೋರ್ಟ್ ವಾದ ಪ್ರತಿವಾದವನ್ನು ಆಲಿಸಿ ಹರಾಜಿಗೆ ತಡೆಯಾಜ್ಞೆ ನೀಡಿ, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News