ಬಿಬಿಎಂಪಿ ಸೂಪರ್ ಸೀಡ್ ಏಕೆ ಮಾಡಬಾರದು: ಹೈಕೋರ್ಟ್
ಬೆಂಗಳೂರು, ಜ.19: ಆಂತರಿಕ ಲೆಕ್ಕ ಪರಿಶೋಧನೆ ನಡೆಯದ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ಏಕೆ ಸೂಪರ್ ಸೀಡ್ ಮಾಡ ಬಾರದೆಂದು ಹೈಕೋರ್ಟ್ ಸರಕಾರಿ ವಕೀಲರನ್ನು ಪ್ರಶ್ನಿಸಿದೆ. ಈ ಸಂಬಂಧ ನಮ್ಮ ಬೆಂಗಳೂರು ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಸ್.ಜಿ. ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿಯಲ್ಲಿ ಶಿಸ್ತನ್ನು ಕಾಪಾಡಿ ಕೊಳ್ಳದ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದೆಂದು ಸರಕಾರಿ ವಕೀಲರನ್ನು ಹೈಕೋರ್ಟ್ ಪ್ರಶ್ನಿಸಿತು.
ಬಿಬಿಎಂಪಿ ವಾರ್ಡ್ ಮಟ್ಟದ ಅಧಿಕಾರಿಗಳು ತಮ್ಮ ಹೆಸರುಗ ಳಲ್ಲಿ ಖಾತೆಗಳನ್ನು ತೆರೆದುಕೊಂಡಿದ್ದು, ಆ ಖಾತೆಗಳಲ್ಲಿ ಸಾರ್ವಜ ನಿಕರ ತೆರಿಗೆ ಹಣವನ್ನು ಜಮಾ ಮಾಡುತ್ತಿದ್ದಾರೆ. ಇದರಿಂದ ಅಕ್ರಮಗಳು ನಡೆಯುವ ಸಂಭವವಿದೆ ಎಂಬ ಪ್ರಶ್ನೆ ಹಾಕಿದರು.
ಬಿಬಿಎಂಪಿಯಲ್ಲಿ ಶಿಸ್ತನ್ನೂ ರೂಢಿಸಿಕೊಂಡಿಲ್ಲ. ಇದರಿಂದ, ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಅವಕಾಶವೂ ಕೈತಪ್ಪಿ ಹೋಯಿತು ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿ ವಿಚಾ ರಣೆಯನ್ನು ಒಂದು ವಾರಗಳ ಕಾಲ ಮುಂದೂಡಿದ್ದಾರೆ.