ರೋಹಿತ್ ಸಾವು ಪ್ರಕರಣ; ಬೆಂವಿವಿ: ವಿದ್ಯಾರ್ಥಿಗಳ ಪ್ರತಿಭಟನೆ
Update: 2016-01-19 23:34 IST
ಬೆಂಗಳೂರು, ಜ.19: ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಹೈದರಾಬಾದ್‌ನ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟಾಚಲ, ಟಿ.ಎಚ್.ಸುರೇಶ್, ಡಾ. ದೇವಾನಂದ್, ಡಾ.ಚಂದ್ರಶೇಖರ್, ಡಾ.ಟಿ.ಕುಮಾರಸ್ವಾಮಿ ಸಾಕ್ಯ, ಶ್ರೀಧರ್ ಮತ್ತು ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.