ರೋಹಿತ್ ಸಾವು ಪ್ರಕರಣ; ಕೋಲಾರ: ದಲಿತ ಹಕ್ಕುಗಳ ಸಮಿತಿ ಧರಣಿ
Update: 2016-01-19 23:37 IST
ಕೋಲಾರ, ಜ.19: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ ಪಿಹೆಚ್‌ಡಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರವರು ಎಬಿವಿಪಿಯ ಮಾನಸಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೆೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಬಿ.ವಿ.ಸಂಪಂಗಿ, ಎಂ.ವಿಜಯಕೃಷ್ಣ, ಹೆಚ್.ಎಂ.ಯಲ್ಲಪ್ಪ, ಮುನಿರಾಜಮ್ಮ, ವೆಂಕಟಾಚಲಪತಿ, ಆನಂದ್, ಕೆ.ಎಂ.ಸುಶೀಲ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಜೆಎಂಎಸ್ ರಾಜ್ಯಾಧಕ್ಷೆ ್ಷ ವಿ.ಗೀತಾ, ಕೆಪಿಆರ್‌ಎಸ್ ಮುಖಂಡರಾದ ಪಿ.ಆರ್.ನವೀನ್‌ಕುಮಾರ್, ಎನ್.ಎನ್.ಶ್ರೀರಾಮ್, ನಾರಾಯಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.