×
Ad

ರೋಹಿತ್ ಸಾವು ಪ್ರಕರಣ; ಮತೀಯವಾದಿಗಳಿಂದ ದಲಿತರ ಶಿಕ್ಷಣಕ್ಕೆ ಅಡ್ಡಿ’

Update: 2016-01-19 23:38 IST

ಹಾಸನ, ಜ.19: ಹೈದರಾಬಾದ್‌ನ ಕೇಂದ್ರಿಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣಕರ್ತರ ಮೇಲೆ ಕ್ರಮಕ್ಕೆ ಆಗ್ರಹಿಸಿ ಎಸ್‌ಎಫ್‌ಐ, ಡಿವೈಎಫ್‌ಐ, ಡಿಎಸ್‌ಎಸ್ ಹಾಗೂ ದಲಿತ ಮತ್ತು ಜನಪರ ಸಂಘಟನೆಗಳಿಂದ ನಗರದ ಜಿಲ್ಲಾಧಿಕಾರಿ ಕಚೆೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ದಲಿತ ಮುಖಂಡರು ಎಚ್.ಕೆ. ಸಂದೇಶ್, ಧರ್ಮೇಶ್, ಹೆತ್ತೂರ್ ನಾಗರಾಜ್, ಆರ್.ಪಿ.ಐ. ಸತೀಶ್, ಚೌಡಳ್ಳಿ ಜಗದೀಶ್, ಎಂ.ಎನ್. ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News