×
Ad

ಜ.22ರಂದು ಕೊಡಗಿಗೆ ತೊಗಡಿಯಾ

Update: 2016-01-19 23:38 IST

ಮಡಿಕೇರಿ, ಜ.19: ವಿಶ್ವ ಹಿಂದೂ ಪರಿಷತ್‌ನ ಮುಖಂಡ ಪ್ರವೀಣ್ ತೊಗಾಡಿಯಾ ಜ.22ರಂದು ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಟಿಪ್ಪುಜಯಂತಿ ಸಂದರ್ಭದ ಗಲಭೆಯಲ್ಲಿ ಮೃತಪಟ್ಟಿರುವ ವಿಎಚ್‌ಪಿಯ ಜಿಲ್ಲಾ ಮುಖಂಡ ಕುಟ್ಟಪ್ಪಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಸಾಂತ್ವ್ವನ ನೀಡಲಿದ್ದಾರೆ. ನಂತರ ನಗರದಲ್ಲಿರುವ ಕ್ರಿಸ್ಟಲ್ ಕೋರ್ಟ್‌ನಲ್ಲಿ ಬೆಳಗ್ಗೆ 11:15ಕ್ಕೆ ವಿಎಚ್‌ಪಿ ಕಾರ್ಯಕರ್ತರನ್ನು ಭೆೇಟಿಯಾಗಲಿದ್ದಾರೆ ಎಂದು ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಐ.ಎಂ.ಅಪ್ಪಯ್ಯ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್‌ನಿಂದ ಬಿಗಿ ಭದ್ರತೆ: ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ಮಡಿಕೇರಿಗೆ ಆಗಮಿಸುವ ಸಂದರ್ಭ ಬಿಗಿ ಭದ್ರತೆ ನೀಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News