ಮಂಡ್ಯ: ವಸತಿ ಶಾಲೆಯ ಮೂವರು ಮಕ್ಕಳು ನಾಪತ್ತೆ
Update: 2016-01-21 23:29 IST
ಮಂಡ್ಯ, ಜ.21: ತಾಲೂಕಿನ ತುಂಬಕೆರೆ ಮೊರಾರ್ಜಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಜ.19ರಿಂದ ಕಾಣೆಯಾಗಿದ್ದಾರೆ. ಈ ಸಂಬಂಧ ಶಾಲೆಯ ಶಿಕ್ಷಕ ಸುರೇಶ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
8ನೆ ತರಗತಿಯ ತುಂಬಕೆರೆ ಗ್ರಾಮದ ರಂಜಿತ್‌ಗೌಡ, ಬಸರಾಳು ಹೋಬಳಿ ಶ್ಯಾನುಭೋಗನಹಳ್ಳಿಯ ಎಸ್.ಆರ್.ದೀಕ್ಷಿತ್ ಹಾಗೂ ಚಂದಗಾಲು ಗ್ರಾಮದ ನಂದನ್‌ಕುಮಾರ್ ಕಾಣೆಯಾಗಿರುವ ವಿದ್ಯಾರ್ಥಿಗಳು.
ಮೇಲ್ಕಂಡ ಮಕ್ಕಳ ಬಗ್ಗೆ ಮಾಹಿತಿ ತಿಳಿದವರು, ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.