×
Ad

ಚಿಕ್ಕಮಗಳೂರು : ಕಳ್ಳ ‘ಉಗ್ರ’ನಾದ ಕಥೆ

Update: 2016-01-22 19:56 IST

ಚಿಕ್ಕಮಗಳೂರು, ಜ.22: ಉಗ್ರನ ಬಂಧನದ ವದಂತಿಯು ನಗರದ ಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದ ಘಟನೆ ಶುಕ್ರವಾರ ನಡೆಯಿತು. ಬಂಧಿತ ಆರೋಪಿಯು ಉಗ್ರನ ಬದಲಿಗೆ ಆಭರಣ ಕಳ್ಳ ಎಂಬುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೆ.ಸಂತೋಷ್ ಬಾಬು ಸ್ಪಷ್ಟಪಡಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಈ ಸಂಬಂಧ ಎಸ್ಪಿ ಸಂತೋಷ್ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದ ಮುಂಬೈಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಕಲ್ಲುದೊಡ್ಡಿಯ ಮುನ್ನ ಸೈಯದ್ ಕುರಬಾನ್ ಎಂಬಾತನನ್ನು ಇಂದು ಮುಂಜಾನೆ ಬಂಸಲಾಗಿದೆ. ಮುನ್ನನೊಂದಿಗೆ ಬಂದ ಪೊಲೀಸರು ಆತನ ಮಾವ ಮತ್ತು ಅತ್ತೆ, ಆತನ ಪತ್ನಿಯನ್ನು ವಶಕ್ಕೆ ಪಡೆದಿದ್ದರು. ಉಗ್ರನ ಬಂಧನ ಇದು ಎಂಬುದಾಗಿ ಜಿಲ್ಲೆಯಾದ್ಯಂತ ಹರಡಿತ್ತು ಎಂದು ಸ್ಪಷ್ಟಪಡಿಸಿದರು.
 ಆತ ಕಳವು ಮಾಡಿರುವ ಚಿನ್ನಾಭರಣಗಳನ್ನು ನಗರದ ವಿವಿಧೆಡೆ ಮಾರಾಟ ಮಾಡಿದ್ದನು. ಅವುಗಳನ್ನು ವಶಪಡಿಸಿಕೊಳ್ಳಲು ಮಹಾರಾಷ್ಟ್ರ ಸಿಟಿ ಪೋಲೀಸರು ನಗರಕ್ಕೆ ಕರೆತಂದಿದ್ದರು. ಆತನ ಪತ್ನಿ ಮತ್ತು ಮಾವ ಮೊಹಿಯುದ್ದೀನ್ ಸೈಯದ್‌ನನ್ನು ವಿಚಾರಣೆ ನಡೆಸುವ ಉದ್ದೇಶದಿಂದ ವಶಕ್ಕೆ ಪಡೆಯಲಾಗಿತ್ತು ಎಂದು ಸ್ಪಷ್ಟಪಡಿಸಿದರು.
  ಮುನ್ನ ಮೂಲತಃ ಚಿಕ್ಕಮಗಳೂರು ನಗರದ ಕಲ್ಲುದೊಡ್ಡಿಯವನ್ನಾಗಿದ್ದಾನೆ. ಆತ ಕಳೆದ ಹಲವು ವರ್ಷಗಳಿಂದ ಮುಂಬೈ ರಸ್ತೆ ಬದಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಅಲ್ಲಿಯೇ ಸುಮಾರು 40 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.
 ರಾಜ್ಯದ ವಿವಿಧೆಡೆ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಸುದ್ದಿಗಳು ಈತನ ಬಂಧನದ ವಿಷಯದಲ್ಲಿಯೂ ತಳಕು ಹಾಕಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News