×
Ad

ಉಡುಪಿ : ನಾಳೆ ‘ಸಹಬಾಳ್ವೆಯ ಸಾಗರ’ಆಹ್ವಾನ ಪತ್ರ ಬಿಡುಗಡೆ

Update: 2016-01-22 22:38 IST

ಉಡುಪಿ, ಜ.22: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ಗಾಂಧಿ ಹತ್ಯೆಯ ದಿನವಾದ ಜ.30ರಂದು ಮಂಗಳೂರಿನ ಪುರಭವನದಲ್ಲಿ ನಡೆಯುವ ‘ಸಹಬಾಳ್ವೆಯ ಸಾಗರ’ ರಾಷ್ಟ್ರೀಯ ಸಮಾವೇಶದ ಆಹ್ವಾನ ಪತ್ರ ಮತ್ತು ಪೋಸ್ಟರ್ ಬಿಡುಗಡೆ ಸಮಾರಂಭವು ಜ.23ರಂದು ಸಂಜೆ 5ಗಂಟೆಗೆ ನಡೆಯಲಿದೆ.
ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್‌ನ ಹಾಲ್‌ನಲ್ಲಿ ಜರಗುವ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿ ವೈದೇಹಿ ಆಹ್ವಾನ ಪತ್ರ ಮತ್ತು ಪೋಸ್ಟರ್ ಬಿಡುಗಡೆ ಮಾಡಲಿರುವರು. ಬಳಿಕ ಉಡುಪಿ ಜಿಲ್ಲೆಯ ಸ್ವಾಗತ ಸಮಿತಿಯ ಸಭೆ ನಡೆಯಲಿದೆ. ವೇದಿಕೆಯ ಎಲ್ಲಾ ಸಹಭಾಗಿ ಸಂಘಟನೆಗಳ ಪದಾಧಿಕಾರಿಗಳು ಇದರಲ್ಲಿ ಹಾಜರಿರಬೇಕಾಗಿ ವೇದಿಕೆ ಜಿಲ್ಲಾಧ್ಯಕ್ಷ ಜಿ.ರಾಜ ಶೇಖರ್ ಹಾಗೂ ಕಾರ್ಯದರ್ಶಿ ಡಿ.ಎಸ್.ಬೆಂಗ್ರೆ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor