ಕರ್ನಾಟದಲ್ಲಿ ಆರು ಶಂಕಿತ ಉಗ್ರರ ಸೆರೆ
ಬೆಂಗಳೂರು, ಜ.22: ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ರಾಜ್ಯದಲ್ಲಿ ಇಂದು ನಡೆಸಿದ ದಾಳಿಯಲ್ಲಿ ಆರು ಶಂಕಿತ ಉಗ್ರರನ್ನು ವಶಕ್ಕೆ ತೆಗದುಕೊಂಡಿದ್ದಾರೆ.
ಶಂಕಿತ ಉಗ್ರರೆಂಬ ಆರೋಪದಲ್ಲಿ ಎನ್‌ಐಎ ವಶದಲ್ಲಿರುವ ಆರು ಮಂದಿಯಲ್ಲಿ ಓರ್ವ ಕೆಮಿಕಲ್ ಮತ್ತು ಓರ್ವ ಸಾಫ್ಟ್‌ವೆರ್ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿದ್ದಾರೆ.
ಬೆಂಗಳೂರು, ಮಂಗಳೂರು, ತುಮಕೂರಿನಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ಧಾರೆ. ಇತರ ನಾಲ್ವರನ್ನು ವಶಕ್ಕೆ ತೆಗದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಮಂಗಳೂರಿನ ಬಜ್ಪೆ ಪೆರ್ಮುದೆಯ ನಜ್ಮುಲ್ ಹುದಾ(26) ಮತ್ತು ಸಾಫ್ಟ್ ವೇರ್ ಎಂಜಿನಿಯರ್ ಮುಹಮ್ಮದ್ ಅಫ್ಸಲ್ (31) ಇವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ನಜ್ಮುಲ್ ಹುದಾ ಬೆಂಗಳೂರಿನ ಆರ್‌ವಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಅಫ್ಸಲ್ ಸಾಫ್ಟ್ವೇರ್ ಎಂಜಿನಿಯರ‍್ ವಿದ್ಯಾರ್ಥಿ. ಅಫ್ಸಲ್‌ನ್ನು ಬೆಂಗಳೂರಿನ ಸರಾಯಿಪಾಳ್ಯದಿಂದ ಎನ್‌ಐಎ ಬಂಧಿಸಿತು.
ಕಾಟನ್‌ಪೇಟೆಯ ಸೊಯೈಲ್ ಅಹ್ಮದ್ , ತುಮಕೂರಿನ ಹುಸೇನ್ ಮುಜಾಹಿದ್‌ನನ್ನು ವಶಕ್ಕೆ ತೆಗೆದುಕೊಂಡು ಎನ್‌ಐಎ ವಿಚಾರಣೆಗೊಳಪಡಿಸಿದೆ. ಉಳಿದವರ ವಿವರ ಗೊತ್ತಾಗಿಲ್ಲ