×
Ad

ಎಡಿಜಿಪಿ ರವೀಂದ್ರನಾಥ್ ಕಾಫಿ ಶಾಪ್ ಪ್ರಕರಣ ವಜಾ

Update: 2016-01-23 00:34 IST

ಬೆಂಗಳೂರು: ರೆಸ್ಟೋರೆಂಟ್‌ನಲ್ಲಿ ಯುವತಿಯೋರ್ವಳ ಫೋಟೊ ಕ್ಲಿಕ್ಕಿಸಿದ ಆರೋಪಕ್ಕೆ ಒಳಗಾಗಿದ್ದ ಎಡಿಜಿಪಿ ರವೀಂದ್ರನಾಥ್ ಪ್ರಕರಣವನ್ನು ರಾಜ್ಯ ಹೈಕೋರ್ಟ್‌ನ ನ್ಯಾಯಪೀಠವು ವಜಾಗೊಳಿಸಿದೆ.

ರೆಸ್ಟೋರೆಂಟ್‌ನಲ್ಲಿ ಕಾಫಿ ಕುಡಿಯುತ್ತಿದ್ದ ಯುವತಿಯೋರ್ವಳ ಫೋಟೊ ಕ್ಲಿಕ್ಕಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಡಿಜಿಪಿ ರವೀಂದ್ರನಾಥ್ ಮೇಲೆ ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಸಂಗದಿಂದ ತೀರಾ ಮುಜುಗರಕ್ಕೆ ಸಿಲುಕಿದ್ದ ಸರಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ವರದಿಯನ್ನು ಪ್ರಶ್ನಿಸಿ ಹಾಗೂ ತನಿಖೆಗೆ ತಡೆ ಮತ್ತು ಪ್ರಕರಣ ವಜಾ ಕೋರಿ ರವೀಂದ್ರನಾಥ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೊ ಕ್ಲಿಕ್ಕಿಸಿದ ಬಗ್ಗೆ ಫೋರೆನಿಕ್ಸ್ ಲ್ಯಾಬ್ ನೀಡಿರುವ ವರದಿ ಪರಿಗಣಿಸಿದ ನ್ಯಾಯಪೀಠವು, ಪ್ರಕರಣವನ್ನು ವಜಾಗೊಳಿಸಿದೆ.

ತನಿಖಾಧಿಕಾರಿಗಳು ಸಲ್ಲಿಸಿರುವ ವರದಿ ಅನುಸಾರ 10.26ಕ್ಕೆ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆದರೆ, 10.45ಕ್ಕೆ ಫೋಟೊ ಕ್ಲಿಕ್ಕಿಸಲಾಗಿದೆ ಎಂದು ಫೋರೆನಿಕ್ಸ್ ಲ್ಯಾಬ್ ವರದಿ ನೀಡಿತ್ತು. ಇದನ್ನು ಆಧರಿಸಿ ಪ್ರಕರಣ ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News