×
Ad

ರಾಜ್ಯದ ಶಂಕಿತ ಆರು ಉಗ್ರರು ಜ. 27ರ ತನಕ ದಿಲ್ಲಿಯ ಎನ್‌ಐಎ ಕಸ್ಟಡಿಗೆ

Update: 2016-01-23 13:10 IST

ಬೆಂಗಳೂರು, ಜ.23: ರಾಜ್ಯದ ಬೆಂಗಳೂರು, ಮಂಗಳೂರು ಮತ್ತು ತುಮಕೂರಿನಲ್ಲಿ  ಶುಕ್ರವಾರ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕಾರ್ಯಾಚರಣೆ ನಡೆಸಿ ಬಂಧಿಸಿದ್ದ ಶಂಕಿತ ಉಗ್ರರೆನ್ನಲಾದ ಆರು ಮಂದಿಯನ್ನು ಇಂದು ಬೆಂಗಳೂರಿನ  ಎನ್‌ಐಎ ಕೋರ್ಟ್‌‌ಗೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಜನವರಿ 27ರ  ತನಕ ದಿಲ್ಲಿಯ ಎನ್‌ಐಎ ವಶಕ್ಕೆ ಒಪ್ಪಿಸಿದೆ.
ಬಂಧಿತ ಮಂಗಳೂರಿನ ನಜ್ಮುಲ್‌ ಹುಸೈನ್‌, ಬೆಂಗಳೂರಿನ ಆಸಿಫ್‌, ಅಹಾದ್ , ಮೊಹಮ್ಮದ್ ಸೊಹೈಲ್‌., ಟೆಕ್ಕಿ ಮೊಹಮ್ಮದ್‌ ಅಫ್ಜಲ್‌,  ತುಮಕೂರಿನ ಸೈಯದ್‌ ಮುಜಾಹಿದ್‌ ಪಾಷಾ ಎಂಬವರನ್ನು ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ನೃಪತುಂಗ ರಸ್ತೆಯ ಸಿಟಿ ಸಿವಿಲ್ ಕೋರ್ಟ್‌ ಕಟ್ಟಡದಲ್ಲಿರುವ ಎನ್‌ಐಎ ಕೋರ್ಟ್‌‌ಗೆ ಹಾಜರು ಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರನ್ನು  ಜನವರಿ 27ರ ತನಕ  ಹೆಚ್ಚಿನ ವಿಚಾರಣೆಗಾಗಿ ಎನ್‌ಐಎ ಅಧಿಕಾರಿಗಳ ವಶಕ್ಕೆ ನೀಡಿತು.
ಶಂಕಿತ ಉಗ್ರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ನ್ಯಾಯಾಲಯದ ಆವರಣದಲ್ಲಿ ಬಿಗು ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News