×
Ad

ಕರ್ನಾಟಕದ ಇಬ್ಬರು ಶಂಕಿತರ ಬಂಧನ: ಎನ್‌ಐಎ ಸ್ಪಷ್ಟನೆ

Update: 2016-01-23 23:54 IST

ಬೆಂಗಳೂರು, ಜ.23: ಐಸಿಸ್ ಸಂಪರ್ಕದ ಶಂಕೆಯ ಮೇಲೆ ಮುಂಬೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಒಟ್ಟು 14 ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದು, ಆ ಪೈಕಿ ಕರ್ನಾಟಕ ಮೂಲದ ಇಬ್ಬರು ಸೇರಿದಂತೆ ಒಟ್ಟು ಐವರು ಶಂಕಿತರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.


 ಬಂಧಿತ ಶಂಕಿತರನ್ನು ಮುಂಬೈ ಮೂಲದ ಮುದಬ್ಬಿರ್‌ಮುಷ್ತಾಕ್ ಶೇಖ್ ಯಾನೆ ಅಬೂ ಮುಸಾಬ್ (33), ಹೈದರಾಬಾದ್ ಮೂಲದ ಮುಹಮ್ಮದ್ ನಫೀಸ್ ಖಾನ್ ಯಾನೆ ಫಾತಿಮಾ ಖಾನ್ ಯಾನೆ ಅಬು ಝರಾರ್ ಯಾನೆ ಅಕ್ರಮ್ (24), ಶರೀಫ್ ಮೊಯಿನುದ್ದೀನ್ ಖಾನ್ (54), ಮಂಗಳೂರಿನ ನಜ್ಮುಲ್ ಹುದಾ ಯಾನೆ ಮಜ್ನು (25), ಬೆಂಗಳೂರಿನ ಮುಹಮ್ಮದ್ ಅಫ್ಝಲ್ ಯಾನೆ ಅಬು ಮರಿಯಮ್ ಯಾನೆ ಯಾಸೀರ್ (35) ಎಂದು ಗುರುತಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News