ರಾಷ್ಟ್ರಪತಿಗಳ ‘ವಿಶಿಷ್ಟ-ಶ್ಲಾಘನೀಯ’ ಪದಕ; 28 ಮಂದಿ ಪೊಲೀಸ್ ಅಧಿಕಾರಿಗಳು -ಸಿಬ್ಬಂದಿ ಆಯ್ಕೆ
ಬೆಂಗಳೂರು, ಜ. 25: ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡುವ ಪ್ರತಿಷ್ಠಿತ ರಾಷ್ಟ್ರಪತಿಗಳ ವಿಶಿಷ್ಟ ಪದಕ ಮತ್ತು ಶ್ಲಾಘನೀಯ ಪದಕಕ್ಕೆ 28 ಮಂದಿ ಆಯ್ಕೆಯಾಗಿದ್ದಾರೆ.
ವಿಶಿಷ್ಟ: ಸುನೀಲ್ ಅಗರ್‌ವಾಲ್- ಎಡಿಜಿಪಿ ಬೆಂಗಳೂರು, ಪಾಂಡುರಂಗ ಎಚ್.ರಾಣೆ ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ, ಕೆ.ಎಚ್.ಜಗದೀಶ್- ಲೋಕಾಯುಕ್ತ ಎಸ್ಪಿ ತುಮಕೂರು ಹಾಗೂ ಚಿಕ್ಕವೆಂಕಟಪ್ಪ ಗೃಹ ರಕ್ಷಕ ದಳ ಇವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಪದಕ ಲಭಿಸಿದೆ.
ಶ್ಲಾಘನೀಯ: ಎಂ.ಚಂದ್ರಶೇಖರ್- ಮಂಗಳೂರು ನಗರ ಪೊಲೀಸ್ ಆಯುಕ್ತ, ಡಿ.ರೂಪಾ-ನಿರ್ದೇಶಕಿ ಸಕಾಲ ಮಿಷನ್, ಎನ್.ಡಿ.ಬಿರ್ಜೆ- ಡಿಪಿಸಿ ಮೈಸೂರು ನಗರ, ಎನ್.ಸಿ.ಶಂಕರಯ್ಯ-ಎಸಿಪಿ ಸಿಸಿಬಿ- ಬೆಂಗಳೂರು, ಎಸ್.ಎಚ್.ದುಗ್ಗಪ್ಪ-ಎಸಿಪಿ ಏರ್‌ಪೋರ್ಟ್ ಉಪಭಾಗ ಬೆಂಗಳೂರು.
ಆರ್.ಗಿರಿಜೇಶ್-ಎಸಿಪಿ ಮೈಸೂರು ನಗರ ದೇವರಾಜ ಉಪವಿಭಾಗ, ಮದನ್ ಎ.ಗಾಂವಕರ್-ಎಸಿಪಿ ಮಂಗಳೂರು ನಗರ ಉತ್ತರ ಉಪವಿಭಾಗದ ಎಸಿಪಿ, ಎಸ್.ಡಿ. ವೆಂಕಟಸ್ವಾಮಿ-ಎಸ್ಸಿ ಲೋಕಾಯುಕ್ತ, ಬುಳ್ಳಕ್ಕನವರ್-ಡಿವೈಎಸ್ಪಿ ಸಕಲೇಶ್ವರ ಹಾಸನ, ಶಂಭುಲಿಂಗಪ್ಪ-ಡಿವೈಎಸ್ಪಿ ಹುಬ್ಬಳ್ಳಿ ನಗರ, ದಯಾನಂದ್-ಡಿವೈಎಸ್ಪಿ ದಾಂಡೇಲಿ ಉಪ ವಿಭಾಗ, ರಾಜೀವ್ ಸಿದ್ದರಾಮ್-ಎಸಿಪಿ ಬೆಳಗಾವಿ ನಗರ.
ರಾಮ್‌ಸುಬ್ಬು- ಇನ್‌ಸ್ಪೆಕ್ಟರ್ ಚಿತ್ರದುರ್ಗ, ಪುಟ್ಟಯ್ಯ-ಪಿಎಸ್ಸೈ ಗುಪ್ತದಳ, ಜ್ಞಾನೇಂದ್ರ-ಎಎಸ್ಸೈ ಮಲ್ಲೂರು ಶಿವಮೊಗ್ಗ, ಚಿನ್ನಪ್ಪ-ಕೆಎಸ್‌ಆರ್‌ಪಿ, ರಾಮಕೃಷ್ಣಯ್ಯ- ಕೆಎಸ್‌ಆರ್‌ಪಿ, ಹುಲಿಯಪ್ಪ-ಕೆಎಸ್‌ಆರ್‌ಪಿ, ತಿಮ್ಮಪ್ಪಗೌಡ, ಕೆಎಸ್‌ಆರ್‌ಪಿ ಹಾಗೂ ಎಂ.ವಿ.ಶ್ರೀನಿವಾಸ ಇವರಿಗೆ ಶ್ಲಾಘನೀಯ ಪದಕ ಲಭಿಸಿದೆ.
ಗೃಹ ರಕ್ಷಕ ದಳ: ಸುಧಾಕರ್-ಪ್ಲೆಟೂನ್ ಕಮಾಂಡರ್-ಬೀದರ್, ನಾಗರಾಜ್ ವಿ.-ಧಾರವಾಡ, ರಾಮಪ್ಪ ಸಂಗಪ್ಪ ಎಚ್.-ಕೊಪ್ಪಳ ಜಿಲ್ಲೆ, ಸುರೇಶ್ ಚಂದ್ರ ಭಂಡಾರಿ ಬೆಂಗಳೂರು ಇವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಸಂದಿದೆ ಎಂದು ಪ್ರಕಟನೆ ತಿಳಿಸಿದೆ.