ಪರೀಕ್ಷಾ ಪ್ರವೇಶ ಪತ್ರ: ಜ.28ರೊಳಗೆ ಡೌನ್‌ಲೋಡ್ ಮಾಡಿಕೊಳ್ಳಿ
ಬೆಂಗಳೂರು, ಜ. 25: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ ವಿವಿಧ ಸರಕಾರಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಶುಶ್ರೂಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜ.31ರಂದು ನಡೆಸುತ್ತಿದ್ದು, ಅಭ್ಯರ್ಥಿಗಳು ಜ.28ರೊಳಗೆ ತಮ್ಮ ಪರೀಕ್ಷಾ ಪ್ರವೇಶಪತ್ರ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಕೋರಿದೆ.
ಈ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅರೆವೈದ್ಯಕೀಯ ಹುದ್ದೆಗಳಿಗೆ ಅರ್ಜಿಸಲ್ಲಿಸಿದ್ದು ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯಲಿರುವ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರಗಳನ್ನು ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಠಿಠಿ://ಛ್ಟಿ.ಚ್ಟ.ಜ್ಞ್ಚಿ.ಜ್ಞಿ ನಿಂದ ಜ.28ಕ್ಕೆ ಮೊದಲು ಡೌನ್ ಲೋಡ್ ಮಾಡಿಕೊಳ್ಳಲು ಸೂಚಿಸಿದೆ.
ಪ್ರಾಧಿಕಾರವು ಜ.26ರಂದು ಕಾರ್ಯ ನಿರ್ವಹಿಸುತ್ತಿದ್ದು , ಪರೀಕ್ಷೆ ಸಂಬಂಧಿತವಾದ ಯಾವುದೇ ಪ್ರಶ್ನೆ/ಅನುಮಾನಗಳ ಬಗ್ಗೆ ಅಭ್ಯರ್ಥಿಗಳು ಅಲ್ಲಿಗೆ ಸಂಪರ್ಕಿಸಬಹುದು. ಶುಶ್ರೂಷಕರ ನೇಮಕಾತಿಯ ಬಿ.ಎಸ್ಸಿ ನರ್ಸಿಂಗ್ ಪರೀಕ್ಷೆಯನ್ನು ರಾಜ್ಯಾದ್ಯಂತ 59 ಕೇಂದ್ರಗಳಲ್ಲಿ ಮತ್ತು ಜಿಎನ್‌ಎಂ ಡಿಪ್ಲೊಮಾ ನರ್ಸಿಂಗ್ ಪರೀಕ್ಷೆಯನ್ನು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಕನ್ನಡ ಭಾಷಾ ಪರೀಕ್ಷೆಯನ್ನು ಜ. 30ರಂದು ನಡೆಸುತ್ತಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅರೆವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಬೆಂಗಳೂರು ಕೇಂದ್ರಗಳಲ್ಲಿ ಮಾತ್ರ ಬರೆಯಬೇಕು. ಒಟ್ಟು 1,491 ಶುಶ್ರೂಷಕರ ಹುದ್ದೆಗಳಿಗೆ 28,591 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಅದರಲ್ಲಿ 8,828 ಪುರುಷ ಮತ್ತು 17,987 ಮಹಿಳಾ ಅಭ್ಯರ್ಥಿಗಳಿದ್ದಾರೆ. ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಿದೆ.