×
Ad

ಎಂಜಿನಿಯರ್‌ಗಳ ನೇಮಕಾತಿಗೆ ಹೈಕೋರ್ಟ್ ತಡೆ

Update: 2016-01-25 23:37 IST

ಬೆಂಗಳೂರು, ಜ.25: ಎಂಜಿನಿಯರ್‌ಗಳ ನೇಮಕಾತಿಯನ್ನು ಕೆಪಿಎಸ್ಸಿ ಮೂಲಕವೇ ಭರ್ತಿ ಮಾಡಿಕೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಸೂಚನೆಗೆ ತಡೆಯಾಜ್ಞೆ ನೀಡಿದೆ.
    
 ಗ್ರಾಮೀಣಾಭಿವೃದ್ಧಿ ಇಲಾಖೆಯು 100 ಎಂಜಿನಿಯರುಗಳ ನೇಮಕಾತಿಗಾಗಿ 2015ರ ಡಿ.7ರಂದು ಅಧಿಸೂಚನೆ ಹೊರಡಿಸಿದೆ. ನೇರ ನೇಮಕಾತಿಯು ಸರಿಯಲ್ಲ. ಕೆಪಿಎಸ್ಸಿ ವತಿಯಿಂದಲೇ ನೇಮಕಾತಿ ಮಾಡಬೇಕು. ನೇಮಕಾತಿ ಸಂದರ್ಭದಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತವರಿಗೆ ಅನ್ಯಾಯ ಆಗುತ್ತಿದೆ. ರಾಜ್ಯದಲ್ಲಿ 16 ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಿವೆ. ರಾಜ್ಯ ಸರಕಾರ ಮಾಡುವ ನೇಮಕಾತಿಯಲ್ಲಿ ಶೇ.70ರಷ್ಟು ಹುದ್ದೆಗಳು ಅವರಿಗೆ ಸಲ್ಲುತ್ತಿವೆ. ಕೇವಲ ಶೇ.30ರಷ್ಟು ಹುದ್ದೆಗಳು ಮಾತ್ರ ಸರಕಾರಿ ಸಂಸ್ಥೆಗಳಿಗೆ ಕಲಿತವರಿಗೆ ದಕ್ಕುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News