ಡಾ.ಒಲಿಂಡಾ ಪಿರೇರಾ ರಿಗೆ ‘ಕರಾವಳಿ ಗೌರವ ಪ್ರಶಸ್ತಿ’ ಪ್ರದಾನ
ಮಂಗಳೂರು, ಜ. 26: ದ.ಕ. ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ 2ನೆ ವರ್ಷದ ‘ಕರಾವಳಿ ಗೌರವ ಪ್ರಶಸ್ತಿ’ಯನ್ನು ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ ವೆಲೆನ್ಸಿಯಾದ ವಿಶ್ವಾಸ್ ಟ್ರಸ್ಟ್‌ನ ನಿರ್ದೇಶಕಿ ಡಾ.ಒಲಿಂಡಾ ಪಿರೇರಾ ಅವರಿಗೆ ಕದ್ರಿ ಲಪುಷ್ಪ ಪ್ರದರ್ಶನದ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು.
ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಡಾ.ಒಲಿಂಡಾ ಪಿರೇರಾ ಉತ್ತಮ ಸೇವೆಯನ್ನು ಸಲ್ಲಿಸಿದ್ದು, ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಒಲಿಂಡಾ ಪಿರೇರಾ, ತನಗೆ ದೊರೆತ ಪ್ರಶಸ್ತಿಯು ತನ್ನ ಸೇವಾ ಕ್ಷೇತ್ರದಲ್ಲಿ ಸಹಕರಿಸಿದ ಎಲ್ಲರಿಗೂ ಸಂದಾಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತರಾದವರಿಗೂ ಬಹುಮಾನ ವಿತರಿಸಲಾಯಿತು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಎಡಿಸಿ ಎಸ್. ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ., ನಿವೃತ್ತ ಕುಲಪತಿ ಪ್ರೊ. ಬಿ.ಎ. ವಿವೇಕ್ ರೈ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೀಶ್, ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಶೇಖರ್ ರೈ ಮೊದಲಾದವರು ಈಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತ ರಮೇಶ್ ಕಿರೋಡಿಯನ್ ಅವರನ್ನು ಅಭಿನಂದಿಸಲಾಯಿತು.
ವಿವಿಧ ಸ್ಪರ್ಧಾ ವಿಜೇತರು:
ಲಪುಷ್ಪ ಪ್ರದರ್ಶನದ ಅಂಗವಾಗಿ ತೋಟಗಾರಿಕೆ ಇಲಾಖೆಯ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ದೊಡ್ಡ ಗಾತ್ರದ ತೋಟಗಾರಿಕೆ ಸ್ಪರ್ಧೆ-ಪ್ರಥಮ; ಸದಾಶಿವಯ್ಯ, ಸಣ್ಣ ಗಾತ್ರದ ತೋಟಗಾರಿಕೆ- ಪ್ರಥಮ; ಉಷಾ ದೇವ್‌ದಾಸ್, ಸಮಾಧಾನಕರ- ಮಮತಾ ಆಚಾರ್ಯ, ಎಲಿಜಬೆತ್ ಪಿರೇರಾ, ಕಿರಣ್ ವಿನೋದ್ ರಾಜ್, ಟೆರೇಸ್ ಗಾರ್ಡನಿಂಗ್- ಪ್ರಥಮ; ಕೃಷ್ಣಪ್ಪ ಗೌಡ, ದ್ವಿತೀಯ; ಕೆ.ಎಸ್. ಭಟ್, ತೃತೀಯ; ಮೋಹಿನಿ, ವಿಶೇಷ ಬಹುಮಾನ-ಪ್ರಥಮ; ಡ್ಯಾನಿ ಡಿಸೋಜಾ, ಪುಷ್ಪ ರಂಗೋಲಿ- ಪ್ರಥಮ; ವಿದ್ಯಾ ನಾಯಕ್, ದ್ವಿತೀಯ; ಲಕ್ಷ್ಮೆಶ, ಪುಷ್ಪ ಜೋಡಣೆ- ಪ್ರಥಮ; ಗೌರೀಶ್ ಮಲ್ಯ, ದ್ವಿತೀಯ; ನಂದಿತಾ ಸುಮನ, ಸಮಾಧಾನಕರ-ಪರಿಣೀತಾ, ವಿದ್ಯಾ ನಾಯಕ್, ತರಕಾರಿ ಕೆತ್ತನೆ- ಪ್ರಥಮ; ಶ್ರೀನಿವಾಸ್ ಕಾಲೇಜ್ ಆ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳಾದ ತಿಲಕ್‌ರಾಜ್, ರಜತ್ ಕುಮಾರ್ ಶೆಟ್ಟಿ, ಸಂಸ್ಥೆಯಲ್ಲಿ ಉದ್ಯಾನವನ ಬೆಳೆಸುವುದು- ಮಥಾಯಸ್ ಪಾರ್ಕ್ ಳ್ನೀರ್.
ಕರಾವಳಿ ಉತ್ಸವ ಮೈದಾನಗದಲ್ಲಿ ಜನವರಿ 23ರಿಂದ ಆರಂಭಗೊಂಡು ಮಾರ್ಚ್ 7ವರೆಗೆ ನಡೆಯುವ ದ.ಕ. ಜಿಲ್ಲಾ ಕರಾವಳಿ ಉತ್ಸವದಲ್ಲಿ 100ಕ್ಕೂ ಅಧಿಕ ಮಳಿಗೆಗಳಿದ್ದು, ವಿವಿಧ ದಿನಬಳಕೆಯ, ಮಹಿಳೆಯರ ಆಲಂಕಾರಿಕ ವಸ್ತುಗಳ ಮಳಿಗೆಗಳು, ಮಕ್ಕಳ ಆಟಿಕೆ, ಹಾಗೂ ದಿನಬಳಕೆಯ ಉಪಯುಕ್ತ ಸಾಮಗ್ರಿಗಳ ಮಳಿಗೆಗಳು ಲಭ್ಯವಿದೆ. ರಾಜಸ್ಥಾನ್ ಕರಕುಶಲ ವಸ್ತುಗಳು ಹಾಗೂ ಬೆಡ್ ಶೀಟ್ಸ್, ಸೋಫಾ ಕವರ್, ಕುಶನ್ ಕವರ್ ಮೊದಲಾದವುಗಳು ಮತ್ತು ಉತ್ತರ ಪ್ರದೇಶದ ಉತ್ಪಾದನೆಯ ಕೈಮಗ್ಗದ ಉಡುಪುಗಳಾದ ಖಾದಿ ಶರ್ಟ್ಸ್, ಜುಬ್ಬಾ, ಪಠಾನ್ ಕುರ್ತಾ ಮೊದಲಾದ ಉಡುಪುಗಳ ಆಕರ್ಷ ಮಳಿಗೆಗಳಿವೆ. ಈ ಉಡುಪುಗಳು ಶೇ. 20 ರಿಯಾಯತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಉತ್ಸವದಲ್ಲಿ ಗ್ರಾಹಕರು ಪ್ರತಿದಿನ ಅದೃಷ್ಟ ಕೂಪನ್‌ನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.
ಜನವರಿ 30 ಮತ್ತು 31ರಂದು ಪಣಂಬೂರು ಕಡಲ ತೀರದಲ್ಲಿ ಆಕರ್ಷಣೀಯ ಬೀಚ್ ಮತ್ತು ಆಹಾರೋತ್ಸವ ಕಾರ್ಯಕ್ರಮಗಳು ನಡೆಯಲಿವೆ.