ಬಳ್ಳಾರಿ: ಜಿಪಂ ತಾಪಂ ಕಾರ್ಯಕರ್ತರ ಸಭೆಯಲ್ಲಿ ಮನಸುಬಿಚ್ಚಿ ಮಾತಾಡಿದಸಚಿವ ಪಿ ಟಿ ಪರಮೇಶ್ವರ್
Update: 2016-01-27 16:34 IST
ಬಳ್ಳಾರಿ: ಜಿಪಂ ತಾಪಂ ಕಾರ್ಯಕರ್ತರ ಸಭೆಯಲ್ಲಿ ಮನಸುಬಿಚ್ಚಿ ಮಾತಾಡಿದಸಚಿವ ಪಿ ಟಿ ಪರಮೇಶ್ವರ್, ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶಣೈ ಎತ್ತಂಗಡಿಮಾಡಿಸಿದ್ದು ನಾನೇ, ನಾನೇ ಎತ್ತಂಗಡಿ ಮಾಡಿಸಿದ್ದು, ಮಂತ್ರಿ ಪೋನ್ ರಿಸೀವ್ಮಾಡದಿದ್ದರೆ ಹೇಗೆ? ಎಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರಗ್ರಾಮದಲ್ಲಿ ಹೇಳಿಕೆ ನೀಡಿದ್ದಾರೆ.
ನಾನೇ ಡಿವೈಎಸ್ಪಿಅನುಪಮಾ ಶಣೈ ಎತ್ತಂಗಡಿ ಮಾಡಿಸಿದ್ದು ನಿಜ. 42 ಸೆಕೆಂಡ್ ಅವರ ಜೊತೆ ಮಾತಾಡಿದ್ದೇನೆ, ಕಾಲ್ ರಿಸೀವ್ ಮಾಡದ್ದಕ್ಕೆ ವರ್ಗಾವಣೆ ಮಾಡಿದೆ ಎಂದು ಸಚಿವ ಪಿ ಟಿ ಪರಮೇಶ್ವರ್ ನಾಯಕ್ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.