×
Ad

ಮಹಿಳೆ ಅನುಮಾನಾಸ್ಪದ ಸಾವು:ಕೊಲೆ ಶಂಕೆ

Update: 2016-01-27 23:06 IST

ಚಾಮರಾಜನಗರ, ಜ.27: ಮಹಿಳೆಯೋರ್ವಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಉತ್ತವಳ್ಳಿ ಗ್ರಾಮದಲ್ಲಿ ನಡೆದಿದ್ದು, ಇದೊಂದು ಕೊಲೆ ಎಂದು ಶಂಕಿಸಲಾಗಿದೆ.
ಚಾಮರಾಜನಗರ ತಾಲೂಕಿನ ಉತ್ತವಳ್ಳಿ ಗ್ರಾಮದ ರಾಜಮ್ಮ (54) ಎಂಬವರೇ ಅನುಮಾನಾಸ್ಪದವಾಗಿ ಸಾವಿಗೀಡಾದ ಮಹಿಳೆ. ಮಹಿಳೆಯ ಶವವು ಮನೆಯ ಬಳಿ ಇರುವ ಇಟ್ಟಿಗೆ ಕಾರ್ಖಾನೆಯ ಶೆಡ್‌ವೊಂದರಲ್ಲಿ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ರಾಜಮ್ಮ ಕೂಲಿ ಕೆಲಸ ಮಾಡಿಕೊಂಡು, ಒಂಟಿಯಾಗಿ ಜೀವನಸಾಗಿಸುತ್ತಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಪತಿ ಮೃತರಾಗಿದ್ದು, ಮಕ್ಕಳಿಬ್ಬರು ಮೈಸೂರಿನಲ್ಲಿ ವಾಸ ಮಾಡಿಕೊಂಡಿದ್ದಾರೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ.ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು, ಮೃತ ರಾಜಮ್ಮಳ ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News